HomeKarnatakaJOB ALERT : ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ...

JOB ALERT : ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿಯ ವಿವಿಧ ವಿಭಾಗಗಳಲ್ಲಿ ಉಳಿಕೆ ಮೂಲ/ಸ್ಥಳೀಯೇತರ ವೃಂದ (Residual Parent (Non-local) Cadre) ದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸ್ಥಳೀಯೇತರ ವೃಂದದ ಅರ್ಹ ಅಭ್ಯರ್ಥಿಗಳಿಂದ ಕಂಪನಿಯ ವೆಬ್‌ಸೈಟ್ (https/huttigold karnataka gov.in) ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 19-03-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-05-2024

ಅರ್ಜಿ ಶುಲ್ಕ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ.ಜಾ., ಪ.ಪಂ., ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಶೇಷಚೇತನ ಅಭ್ಯರ್ಥಿಗಳಾದಲ್ಲಿ ರೂ.100/-, ಹಿಂದುಳಿದ ವರ್ಗದ (ಪ್ರವರ್ಗ 2ಎ, 2ಬಿ, 3ಎ & 3ಬಿ) ಅಭ್ಯರ್ಥಿಗಳಾದಲ್ಲಿ ರೂ.300/- ಮತ್ತು ಸಾಮಾನ್ಯ ಅಭ್ಯರ್ಥಿಗಳಾದಲ್ಲಿ ರೂ.600/- ಮೊತ್ತದ ಶುಲ್ಕವನ್ನು (ಬ್ಯಾಂಕ್ ಶುಲ್ಕವನ್ನು ಹೊರತುಪಡಿಸಿ) ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೇಮೆಂಟ್ ಗೇಟ್ ವೇ ಮೂಲಕ ಪಾವತಿಸಬೇಕು.

ವಿಶೇಷ ಸೂಚನೆ

1) ವೃತ್ತಿ /ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test – CBT) ನಡೆಸುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಂಪನಿಯ ವೆಬ್ ಸೈಟ್ ಹಾಗೂ ಇ-ಮೇಲ್ / ಎಸ್.ಎಮ್.ಎಸ್. ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

2) ವೃತ್ತಿ /ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test – CRT)ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐದು ಅಭ್ಯರ್ಥಿಗಳನ್ನು ಮಾತ್ರ ದೈಹಿಕ / ಸಹಿಷ್ಣುತಾ ಪರೀಕ್ಷೆಗೆ ಹಾಜರಾಗಲು ಸಂಬಂಧಿಸಿದವರಿಗೆ ದೈಹಿಕ / ಸಹಿಷ್ಣುತಾ ಪರೀಕ್ಷೆಯ ವಿವರಗಳು/ಮಾಹಿತಿಯನ್ನು ಕಂಪನಿಯ ವೆಬ್ ಸೈಟ್ ಹಾಗೂ ಇ-ಮೇಲ್ / ಎಸ್.ಎಮ್.ಎಸ್. ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

3) ಅರ್ಹತಾ ಪಟ್ಟಿಯನ್ನು ತಯಾರಿಸಲು ಪ್ರತಿ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇ. 50% (50% weightage) ಹಾಗೂ ನೇಮಕಾತಿ ಪ್ರಾಧಿಕಾರವು ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ (Computer Based Test – CBT) ಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇ.50% ಅಂಕಗಳನ್ನು (50% weightage) ಪರಿಗಣಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಪ್ರಕಟಿಸಲಾಗುವುದು.

ಷರತ್ತುಗಳು ಮತ್ತು ನಿಬಂಧನೆಗಳು

1. ಕಾನೂನು ರೀತ್ಯಾ ಸ್ಥಾಪಿಸಲ್ಪಟ್ಟಿರುವ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ 3 ವರ್ಷಗಳ ಡಿಪ್ಲೊಮಾ, ಹಾಗೂ ಕೈಗಾರಿಕೆತರಬೇತಿ ಸಂಸ್ಥೆಯಿಂದ 2 ವರ್ಷಗಳ ಐ.ಟಿ.ಐ. ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

2. ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿಗೆ ಗರಿಷ್ಠ 38 ವರ್ಷಗಳು ಮತ್ತು ಪ.ಜಾ., ಪ.ಪಂ. ಮತ್ತು ಪ್ರವರ್ಗ-1ಕ್ಕೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.

3. ಅಭ್ಯರ್ಥಿಯು ಮಾಜಿ ಸೈನಿಕ/ವಿಧವೆ/ಅಂಗವಿಕಲರು ಹಾಗೂ ಇನ್ನಿತರರಿಗೆ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ ವಯೋಮಿತಿಯಲ್ಲಿ ನಿಯಮಾನುಸಾರಸಡಿಲಿಕೆಯನ್ನು ನೀಡಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular