HomeKarnatakaJOB ALERT : ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

JOB ALERT : ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ : ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಮಡಿಕೇರಿ ನಗರಸಭೆಗೆ ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್‍ನ್ನು ಹೊರಗುತ್ತಿಗೆ/ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ ಉಳ್ಳವರು ಸ್ವಯಂ ಅರ್ಜಿ ಮತ್ತು ದೃಢೀಕೃತ ದಾಖಲೆಗಳೊಂದಿಗೆ ಡಿಸೆಂಬರ್, 20 ರೊಳಗೆ ಅರ್ಜಿ ಸಲ್ಲಿಸಬೇಕು. ಇದು ಪೂರ್ಣವಾಗಿ ತಾತ್ಕಾಲಿಕ ಹೊರಗುತ್ತಿಗೆ ಹುದ್ದೆಯಾಗಿರುತ್ತದೆ.

ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್ ಪ್ರಥಮ ಆದ್ಯತೆಯನ್ನು (3) ಕ್ಕೆ ದ್ವಿತೀಯ ಆದ್ಯತೆಯನ್ನು (2) ಕ್ಕೆ ಹಾಗೂ ತೃತೀಯ ಆದ್ಯತೆಯನ್ನು (1) ಕ್ಕೆ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿ.ಎಸ್ಸಿ(ಕಂಪ್ಯೂಟರ್ ಸೈನ್ಸ್)/ ಬಿಸಿಎ, ಎಂಎಸ್ಸಿ(ಕಂಪ್ಯೂಟರ್ ಸೈನ್ಸ್) ಅಥವಾ ಬಿಇ(ಕಂಪ್ಯೂಟರ್ ಸೈನ್/ಐಟಿ/ಎಂಸಿಎ) ವಿದ್ಯಾರ್ಹತೆ ಹೊಂದಿರಬೇಕು.ನಿಗದಿತ ಮಾಸಿಕ ಕನಿಷ್ಠ ವೇತನ ರೂ.20584 ಆಗಿರುತ್ತದೆ. ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸುವವರು ಮಾತ್ರ ಸೇವಾ ಶುಲ್ಕವನ್ನು ನಮೂದಿಸುವುದು.ಈ ನಿಗಧಿತ ವೇತನವು ಪ್ರಥಮ ವರ್ಷಕ್ಕೆ ನಿಗಧಿಯಾಗಿದ್ದು, ಮುಂದಿನ ವರ್ಷಗಳಿಗೆ ಸರ್ಕಾರವು ನಿಗಧಿ ಪಡಿಸಿರುವಂತೆ/ ಪಡಿಸುವಂತೆ ಸೇವೆಯನ್ನು ಆಧರಿಸಿ ಪರಿಷ್ಕರಿಸಲಾಗುವುದು. ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular