ನವದೆಹಲಿ: ಜಿಯೋ ಗ್ರಾಹಕರಿಗೆ ಹಲವು ರೀಚಾರ್ಜ್ ಪ್ಲಾನ್ಗಳನ್ನು ನೀಡುತ್ತಿದೆ. ಆದರೆ, ಅದರ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಕೇವಲ ₹11 ಮಾತ್ರ. ಈ ಪ್ಲಾನ್ನಲ್ಲಿ ಯಾವೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ತಿಳಿಯೋಣ.
ಹೌದು. ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ ₹11ಕ್ಕೆ10GB ಹೈ-ಸ್ಪೀಡ್ಡೇಟಾ ನೀಡುವ ವಿಶೇಷ ಡೇಟಾ ಪ್ಲಾನ್ ಅನ್ನು ಪರಿಚಯಿಸಿದೆ. ಕಡಿಮೆ ದರದಲ್ಲಿ ಹೆಚ್ಚಿನ ಡೇಟಾ ಬೇಕಿರುವವರಿಗೆ ಈ ಪ್ಲಾನ್ ಉಪಯುಕ್ತವಾಗಿದ್ದು, 1 ಗಂಟೆಯ ಮಾನ್ಯತೆ ಹೊಂದಿದೆ. ಆದರೆ ಈ ಪ್ಲಾನ್ನಲ್ಲಿ ಅನಿಯಮಿತಕರೆ, SMS ಹಾಗೂOTT ಸೌಲಭ್ಯಗಳು ಒಳಗೊಂಡಿಲ್ಲ ಎಂಬುದು ಗಮನಾರ್ಹ.
₹11 ರೀಚಾರ್ಜ್ ಪ್ಲಾನ್ನಲ್ಲಿ ಒಟ್ಟು 10GB ಡೇಟಾ ದೊರೆಯುತ್ತದೆ. ಈ ಡೇಟಾವನ್ನು ಬಳಸಿಕೊಂಡು ಯಾವುದೇ ಅಡಚಣೆ ಇಲ್ಲದೆ ಇಂಟರ್ನೆಟ್ ಸೇವೆಯನ್ನು ಬಳಸಬಹುದು. ಆದರೆ, ಈ ಪ್ಲಾನ್ನಲ್ಲಿ ಅನಿಯಮಿತ ಕರೆ (Unlimited Calling) ಸೌಲಭ್ಯ ಇರುವುದಿಲ್ಲ. ಇದಲ್ಲದೆ, SMS ಸೌಲಭ್ಯವೂ ಲಭ್ಯವಿಲ್ಲ. ಈ ಮಾಹಿತಿಯನ್ನು ಜಿಯೋ ತನ್ನ ಅಧಿಕೃತ ಪೋರ್ಟಲ್ನಲ್ಲಿ ನೀಡಿದೆ.
ಈ ಪ್ಲಾನ್ನ ಮಾನ್ಯತೆ ಕೇವಲ 1 ಗಂಟೆ. ಅಂದರೆ, 1 ಗಂಟೆಯ ಅವಧಿಯಲ್ಲಿ 10GB ಡೇಟಾವನ್ನು ಬಳಸಿಕೊಳ್ಳಬಹುದು. ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ಡೇಟಾ ಬೇಕಿರುವ ಬಳಕೆದಾರರಿಗಾಗಿ ಜಿಯೋ ಈ ವಿಶೇಷ ಪ್ಲಾನ್ ಅನ್ನು ಪರಿಚಯಿಸಿದೆ. ಈ ರೀಚಾರ್ಜ್ ಪ್ಯಾಕ್ನೊಂದಿಗೆ ಯಾವುದೇ OTT ಅಥವಾ ಇತರ ಆ್ಯಪ್ಗಳ ಚಂದಾದಾರಿಕೆ (Subscription) ದೊರೆಯುವುದಿಲ್ಲ. ಹೆಚ್ಚಿನ ಡೇಟಾ ಬಳಸುವ ಗ್ರಾಹಕರಿಗಾಗಿ ಜಿಯೋ ಇಂತಹ ಹಲವು ಡೇಟಾ-ಕೇಂದ್ರಿತ ಪ್ಲಾನ್ಗಳನ್ನು ಒದಗಿಸಿದೆ.
ಗಮನಿಸಿ: ₹11 ರ ಈ ಪ್ಲಾನ್ನಲ್ಲಿ ಒಟ್ಟು 10GB ಡೇಟಾ ಮಾತ್ರ ಲಭ್ಯವಿದ್ದು, ಮಾನ್ಯತೆ 1 ಗಂಟೆ. ಕರೆ, SMS ಅಥವಾ ಹೆಚ್ಚುವರಿ ಸೌಲಭ್ಯಗಳು ಈ ಪ್ಲಾನ್ನಲ್ಲಿ ಒಳಗೊಂಡಿಲ್ಲ.

