HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'ಜಿಗರ್'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಜಿಗರ್’

ಜುಲೈ 5 ರಂದು ರಾಜ್ಯದ್ಯಂತ ತೆರೆ ಕಂಡಿದ್ದ ಪ್ರವೀಣ್ ತೇಜ್ ಅಭಿನಯದ ಬಹು ನಿರೀಕ್ಷಿತ ‘ಜಿಗರ್’ ಚಿತ್ರ ರಾಜ್ಯದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರವೀಣ್ ತೇಜ್ ಅವರ ಅದ್ಭುತ ನಟನೆ ಹಾಗೂ ಈ ಸಿನಿಮಾ ಕಥೆಗೆ ಪ್ರೇಕ್ಷಕ ಪ್ರಭುಗಳು ಬಹು ಪರಾಕ್ ಎಂದಿದ್ದಾರೆ. ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು, ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದೆ.

ಸೂರಿ ಕುಂದಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ  ಪ್ರವೀಣ್ ತೇಜ್ ಅವರಿಗೆ ಜೋಡಿಯಾಗಿ ವಿಜಯ ಶ್ರೀ ಕಲ್ಬುರ್ಗಿ ಅಭಿನಯಿಸಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಯುಕೆ ಪ್ರೊಡಕ್ಷನ್ ಬ್ಯಾನರ್ ನಡಿ ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿದ್ದು, ಜ್ಞಾನೇಶ್ ಬಿ ಮಾತಾಡ್ ಅವರ ಸಂಕಲನ, ಹಾಗೂ ಶಿವಸೇನಾ ಛಾಯಾಗ್ರಹಣವಿದೆ. ಇದೊಂದು ಆಕ್ಷನ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular