HomeIndiaಆಸ್ಪತ್ರೆಗೆ ಬೆಂಕಿ ತಗುಲಿ ಘೋರ ದುರಂತ: ವೈದ್ಯ ದಂಪತಿ ಸೇರಿ 5 ಜನ ಸಾವು

ಆಸ್ಪತ್ರೆಗೆ ಬೆಂಕಿ ತಗುಲಿ ಘೋರ ದುರಂತ: ವೈದ್ಯ ದಂಪತಿ ಸೇರಿ 5 ಜನ ಸಾವು

ರಾಂಚಿ: ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ.

ಮೃತರಲ್ಲಿ ವೈದ್ಯಕೀಯ ಸಂಸ್ಥೆಯ ಮಾಲೀಕ ಡಾ.ವಿಕಾಸ್ ಹಜ್ರಾ, ಅವರ ಪತ್ನಿ ಡಾ. ಪ್ರೇಮಾ ಹಜ್ರಾ, ಮಾಲೀಕರ ಸೋದರಳಿಯ ಸೋಹನ್ ಖಮಾರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಸೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಧನ್‌ ಬಾದ್‌ ನ ಬ್ಯಾಂಕ್ ಮೋರ್ ಪ್ರದೇಶದಲ್ಲಿರುವ ನರ್ಸಿಂಗ್ ಹೋಂ-ಕಮ್-ಪ್ರೈವೇಟ್ ಹೌಸ್‌ನ ಸ್ಟೋರ್ ರೂಮ್‌ನಲ್ಲಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಧನ್‌ಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಪ್ರೇಮ್ ಕುಮಾರ್ ತಿವಾರಿ, ಸ್ಟೋರ್ ರೂಮ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಉಸಿರುಗಟ್ಟಿದ ಕಾರಣ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ. ನಾಲ್ವರು ಮೃತರನ್ನು ಗುರುತಿಸಲಾಗಿದ್ದು, ಐದನೇ ವ್ಯಕ್ತಿಯನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular