HomeKarnatakaBIG NEWS: ಅವಧಿ ಮೀರಿ ಪಬ್ ತೆರೆದಿದ್ದ ಪ್ರಕರಣ; ಠಾಣಾಧಿಕಾರಿ ಸೇರಿ ಪೊಲೀಸರಿಗೆ ನೋಟಿಸ್ ಜಾರಿ

BIG NEWS: ಅವಧಿ ಮೀರಿ ಪಬ್ ತೆರೆದಿದ್ದ ಪ್ರಕರಣ; ಠಾಣಾಧಿಕಾರಿ ಸೇರಿ ಪೊಲೀಸರಿಗೆ ನೋಟಿಸ್ ಜಾರಿ

ಬೆಂಗಳೂರು: ಜೆಟ್ ಲ್ಯಾಗ್ ಪಬ್ ನಲ್ಲಿ ಸಿನಿ ನಟರ ಭರ್ಜರಿ ಪಾರ್ಟಿ ಹಿನ್ನೆಲೆಯಲ್ಲಿ ಅವಧಿ ಮೀರಿ ಪಬ್ ಓಪನ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಜನವರಿ 3ರಂದು ಅವಧಿ ಮೀರಿ ಪಬ್ ತೆರೆದಿರುವ ಬಗ್ಗೆ ಪಬ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಲ್ಲೇಶ್ವರಂ ಠಾಣೆ ಎಸಿಪಿಗೆ ಆದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಠಾಣೆಯ ಎಸಿಪಿ, ಸುಬ್ರಹ್ಮಣ್ಯ ನಗರ ಠಾಣೆಯ ಠಾಣಾಧಿಕಾರಿ, ಸಬ್ ಇನ್ಸ್ ಪೆಕ್ಟರ್, ನಾಲ್ವರು ಕಾನ್ಸ್ ಟೇಬಲ್ ಗಳಿಗೆ ನೋಟಿಸ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಟ್ ಲ್ಯಾಗ್ ಪಬ್ ಜನವರಿ 3ರಂದು ಅವಧಿ ಮೀರಿ ಓಪನ್ ಇದ್ದಿದ್ದೂ ಅಲ್ಲದೇ ಬೆಳಗಿನ ಜಾವದವರೆಗೂ ತೆರೆದಿತ್ತು. ಮಾಹಿತಿ ಇದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular