HomeLatest Newsರಹಸ್ಯವಾಗಿ ಮದುವೆಯಾದರಾ ನಟಿ ಜೆನ್ನಿಫರ್ ವಿಂಗೆಟ್? ಸಖತ್ ವೈರಲ್ ಆಗ್ತಿದೆ ವೆಡ್ಡಿಂಗ್ ಗೌನ್ ಟ್ರಯಲ್ ವಿಡಿಯೋ

ರಹಸ್ಯವಾಗಿ ಮದುವೆಯಾದರಾ ನಟಿ ಜೆನ್ನಿಫರ್ ವಿಂಗೆಟ್? ಸಖತ್ ವೈರಲ್ ಆಗ್ತಿದೆ ವೆಡ್ಡಿಂಗ್ ಗೌನ್ ಟ್ರಯಲ್ ವಿಡಿಯೋ

ಕಿರುತೆರೆಯ ಜನಪ್ರಿಯ ನಟಿ ಜೆನ್ನಿಫರ್ ವಿಂಗೆಟ್ ಅವರು ತಮ್ಮ ಬಹುಕಾಲದ ಗೆಳೆಯ ವಿಲಿಯಂ ಇಶ್ಮಾಯೆಲ್ ಅವರನ್ನು ಬ್ರಿಟನ್‌ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಮದುವೆ ಕುರಿತು ಜೋಡಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬರದಿದ್ದರೂ, ಜೆನ್ನಿಫರ್ ಅವರು ತಮ್ಮ ಮದುವೆಯ ಬಿಳಿ ಬಣ್ಣದ ಗೌನ್ ಧರಿಸಿ ಟ್ರಯಲ್ ನೋಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಕಾರ್ಲಿಯೋ ಫ್ಯಾಷನ್ ಈ ವಿಶೇಷ ವಿವಾಹದ ಉಡುಪನ್ನು ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದ್ದು, ಇದರ ಮೇಕಿಂಗ್ ಮತ್ತು ಫಿಟ್ಟಿಂಗ್ ಹಂತದ ತುಣುಕುಗಳನ್ನು ಜೆನ್ನಿಫರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಜೆನ್ನಿಫರ್ ಬಟ್ಟೆಯ ವಿನ್ಯಾಸವನ್ನು ಆಯ್ಕೆ ಮಾಡುವುದರಿಂದ ಹಿಡಿದು, ಅಂತಿಮವಾಗಿ ಗೌನ್ ಧರಿಸಿ ಕನ್ನಡಿ ಮುಂದೆ ನಿಂತು ಸಂಭ್ರಮಿಸುವವರೆಗಿನ ದೃಶ್ಯಗಳು ಕಂಡುಬಂದಿವೆ. ಆಕರ್ಷಕ ಎಂಬ್ರಾಯ್ಡರಿ ಕೆಲಸಗಳನ್ನು ಹೊಂದಿರುವ ಈ ಶ್ವೇತವರ್ಣದ ಗೌನ್‌ನಲ್ಲಿ ನಟಿ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಜೆನ್ನಿಫರ್ ವಿಂಗೆಟ್ ಮತ್ತು ಸಿಂಗಾಪುರ ಮೂಲದ ಉದ್ಯಮಿ ವಿಲಿಯಂ ಇಶ್ಮಾಯೆಲ್ ಅವರ ವಿವಾಹ ಮಹೋತ್ಸವವು ಯುನೈಟೆಡ್ ಕಿಂಗ್ಡಮ್‌ನಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ ಎನ್ನಲಾಗಿದೆ. ಕೇವಲ ಕುಟುಂಬದ ಸದಸ್ಯರು ಮತ್ತು ಹತ್ತಿರದ ಸ್ನೇಹಿತರಷ್ಟೇ ಈ ಕ್ರಿಶ್ಚಿಯನ್ ಶೈಲಿಯ ವಿವಾಹದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಜೋಡಿ ಮಾತ್ರ ತಮ್ಮ ಸಂಬಂಧದ ಕುರಿತು ಎಲ್ಲಿಯೂ ತುಟಿ ಬಿಚ್ಚಿಲ್ಲ. ಜೆನ್ನಿಫರ್ ಕೈಹಿಡಿದ ವಿಲಿಯಂ ಇಶ್ಮಾಯೆಲ್ ಅವರು ಸಿಂಗಾಪುರದಲ್ಲಿ ನೆಲೆಸಿದ್ದು, ಹಣಕಾಸು ವಲಯದಲ್ಲಿ ದೊಡ್ಡ ಉದ್ಯಮಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

#JenniferWinget trying out her wedding dress. 🧿🧿🧿🧿🧿🧿 pic.twitter.com/Y3TcCcBCbU

— 🎀 (@_sapientianova) July 17, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular