HomeLatest NewsBIG NEWS: ನಕ್ಸಲರ ವಿರುದ್ಧ ಮುಂದುವರೆದ ಕಾರ್ಯಾಚರಣೆ: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಮಾಂಡರ್ ಹತ್ಯೆ

BIG NEWS: ನಕ್ಸಲರ ವಿರುದ್ಧ ಮುಂದುವರೆದ ಕಾರ್ಯಾಚರಣೆ: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಮಾಂಡರ್ ಹತ್ಯೆ

ಮೇದಿನಿನಗರ: ಜಾರ್ಖಾಂಡ್ ನಲ್ಲಿ ಮಾವೋವಾದಿಗಳ ವ್ರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಪಲಾಮು ಜಿಲ್ಲೆಯಲ್ಲಿ ನಕ್ಸಲರು ಹಗೂ ಭದ್ರತಾಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಮಾಂಡರ್ ಬಲಿಯಾಗಿದಾನೆ.

ಸಿಪಿಐ (ಮಾವೋವಾದಿ) ಸಂಘಟನೆಯ ಕಮಾಂಡರ್ ತುಳಸಿ ಭುಯಿಯಾ ಎಂದು ಗುರುತಿಸಲಾಗಿದೆ. ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚಾರಣೆಯಲ್ಲಿ ತಲೆಗೆ 15 ಲಕ್ಷ ಇನಾಮು ಘೋಷಿಸಿದ್ದ ಮತ್ತೋರ್ವ ಮಾವೋವಾದಿ ನಿತೇಶ್ ಯಾದವ್ ಗಾಯಾಗೊಂಡಿದ್ದಾನೆ. ಸೋಮವಾರ ರಾತ್ರಿ ಮೊಹಮ್ಮದ್ ಗಂಜ್ ಹಾಗೂ ಹೈದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಚುವಾನ್ ನಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ನಡೆದಿದೆ. ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular