HomeLatest NewsBIG NEWS: ಭದ್ರತಾಪಡೆಗಳ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಮತ್ತೋರ್ವ ಕುಖ್ಯಾತ ಮಾವೋವಾದಿ ಹತ್ಯೆ

BIG NEWS: ಭದ್ರತಾಪಡೆಗಳ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಮತ್ತೋರ್ವ ಕುಖ್ಯಾತ ಮಾವೋವಾದಿ ಹತ್ಯೆ

ಜಾರ್ಖಂಡ್ ನಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ. ಭದ್ರತಾಪಡೆಗಳು ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಕುಖ್ಯಾತ ಮಾವೋವಾದಿ ಮನೀಶ್ ಯಾದವ್ ನನ್ನು ಹತ್ಯೆ ಮಾಡಲಾಗಿದೆ.

ಮೌಹದಂದ್ ಪೊಲೀಸ್ ಠಾಣೆ ವ್ಯಾಪ್ತಿಯ ದೌನಾದ ಕಾಡಿನಲ್ಲಿ ಭದ್ರತಾಪಡೆಗಳು ಹಾಗೂ ಮಾವೋವಾದಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮನಿಶ್ ಯಾದವ್ ಭದ್ರತಾಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾನೆ.

ಮನೀಶ್ ಯಾದವ್ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ಘೋಷಿಸಲಾಗಿತ್ತು. ಇದೀಗ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನೋರ್ವ ಮಾವೋವಾದಿ ಕುಂದನ್ ಖೇರ್ವಾರ್ ನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ದಿನಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಮಾವೋವಾದಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿದಂತೆ ಇಬ್ಬರು ಹತರಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular