HomeInternationalಜಪಾನ್‌ನಲ್ಲಿ ಪ್ರಬಲ ಭೂಕಂಪ: 5.9 ತೀವ್ರತೆಯ ಕಂಪನಕ್ಕೆ 23 ಮಂದಿಗೆ ಗಾಯ

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.9 ತೀವ್ರತೆಯ ಕಂಪನಕ್ಕೆ 23 ಮಂದಿಗೆ ಗಾಯ

ಭಾನುವಾರ ಬೆಳಿಗ್ಗೆ ನಿದ್ರೆಯಲ್ಲಿದ್ದ ಜಪಾನ್ ಜನರಿಗೆ ಏಕಾಏಕಿ ದೊಡ್ಡ ಆಘಾತ ಎದುರಾಗಿದೆ. ರಾಜಧಾನಿ ಟೋಕಿಯೊ ಸೇರಿದಂತೆ ದೇಶದ ಪೂರ್ವ ಭಾಗಗಳಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 23 ಜನರು ಗಾಯಗೊಂಡಿದ್ದಾರೆ.

ದಕ್ಷಿಣ ಇಬರಾಕಿ ಪ್ರಾಂತ್ಯದ ಭೂಮಿಯ 70 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಮುಂಜಾನೆ ಧಿಡೀರನೆ ಭೂಮಿ ಕಂಪಿಸುತ್ತಿದ್ದಂತೆ ಜನರು ಭೀತಿಯಿಂದ ಹಾಸಿಗೆಯಿಂದ ಎದ್ದು ಹೊರಗೆ ಓಡಲು ಯತ್ನಿಸಿದ್ದಾರೆ. ಈ ವೇಳೆ ಮೆಟ್ಟಿಲು ಹಾಗೂ ಪೀಠೋಪಕರಣಗಳಿಗೆ ಡಿಕ್ಕಿ ಹೊಡೆದು ಹೆಚ್ಚಿನವರು ಗಾಯಗೊಂಡಿದ್ದಾರೆ. ಯೊಕೊಹಾಮಾ ನಗರದಲ್ಲಿ 80 ವರ್ಷದ ವೃದ್ಧೆಯೊಬ್ಬರು ಹಾಸಿಗೆಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ, ಹರಿದ ನೀರಿನ ಪೈಪ್:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಕಂಪನದ ಧಕ್ಕೆಗೆ ಟೋಕಿಯೊ ಮತ್ತು ನರಿಟಾ ವಿಮಾನ ನಿಲ್ದಾಣದತ್ತ ತೆರಳುವ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಸ್ಥಳೀಯ ರೈಲು ಸೇವೆಗಳು ಕೆಲ ಕಾಲ ಸ್ಥಗಿತಗೊಂಡಿದ್ದವು. ಆದರೆ ಬುಲೆಟ್ ರೈಲು ಸಂಚಾರದಲ್ಲಿ ಯಾವುದೇ ಅಡಚಣೆಯಾಗಿಲ್ಲ. ಟೋಕಿಯೊದ ಕೋಟೋ ಪ್ರದೇಶದಲ್ಲಿ ಪ್ರಮುಖ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ರಸ್ತೆಯಿಡೀ ನೀರು ಹರಿದಿದ್ದು, ನಂತರ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ನಗರದ ಸುಮಾರು 460 ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತಾದರೂ, ಕೆಲವೇ ಗಂಟೆಗಳಲ್ಲಿ ಪೂರೈಕೆ ಸಹಜಸ್ಥಿತಿಗೆ ಬಂದಿದೆ.

ಪ್ರಕೃತಿ ವಿಕೋಪದ ಬೆನ್ನಲ್ಲೇ ಸಾರ್ವಜನಿಕರ ಮೊಬೈಲ್‌ಗಳಿಗೆ ತುರ್ತು ಎಚ್ಚರಿಕೆಯ ಸಂದೇಶಗಳು ರವಾನೆಯಾಗಿದ್ದವು. ಪರಿಸ್ಥಿತಿಯನ್ನು ಹತ್ತಿರದಿಂದ ನಿಗಾವಹಿಸಲು ಜಪಾನ್ ಸರ್ಕಾರ ವಿಶೇಷ ಕಾರ್ಯಪಡೆಯನ್ನು ನೇಮಿಸಿದೆ. ಅದೃಷ್ಟವಶಾತ್ ಈ ಭೂಕಂಪದಿಂದ ಯಾವುದೇ ಸುನಾಮಿ ಭೀತಿ ಎದುರಾಗಿಲ್ಲ ಹಾಗೂ ಅಣುವಿದ್ಯುತ್ ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular