HomeIndiaBIG NEWS: ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಬೆಂಕಿ ದುರಂತ: ಒಂದೇ ಕುಟುಂಬದ 6 ಜನರು ಸಾವು

BIG NEWS: ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಬೆಂಕಿ ದುರಂತ: ಒಂದೇ ಕುಟುಂಬದ 6 ಜನರು ಸಾವು

ಶ್ರೀನಗರ: ನಸುಕಿನಜಾವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಜಮ್ಮು-ಕಾಶ್ಮೀರದ ಕಥುವಾದಲ್ಲಿ ಈ ದುರಂತ ಸಂಭವಿಸಿದೆ. ಮುಂಜಾನೆ 2:30ರ ಸುಮಾರಿಗೆ ಮನೆಯಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಉಳಿದ ನಾಲ್ವವರು ಮನೆಯಿಂದ ಹೊರಬರಲಾಗದೇ ಮೃತಪಟ್ಟಿದ್ದಾನೆ. ನಾಲ್ವರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಕಥುವಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular