HomeIndiaBIG NEWS: ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ ಸಾಗಿಸುತ್ತಿದ್ದಾಗ ದುರಂತ; ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ...

BIG NEWS: ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ ಸಾಗಿಸುತ್ತಿದ್ದಾಗ ದುರಂತ; ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ ಬಲಿಯಾದ ಚಾಲಕ

ಕೃಷ್ಣಗಿರಿ: ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಯನ್ನು ಸಾಗಿಸುತ್ತಿದ್ದಾಗ ತನ್ನದೇ ನಿರ್ಲಕ್ಷ್ಯದಿಂದಾಗಿ ತನ್ನದೇ ಲಾರಿಗೆ ಚಾಲಕ ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶಾನಮಾವು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಗ್ಯ ಸ್ವಾಮಿ (54) ಮೃತ ಲಾರಿ ಚಾಲಕ. ಹ್ಯಾಂಡ್ ಬ್ರೇಕ್ ಹಾಕದೇ ಲಾರಿ ನಿಲ್ಲಿಸಿದ ಚಾಲಕ ಲಾರಿ ಮುಂಭಾಗ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಏಕಾಏಕಿ ಲಾರಿ ಮುಂದೆ ಚಲಿಸಿದ್ದು, ಚಾಲಕನ ಮೇಲೆಯೇ ಹರಿದಿದೆ. ಸ್ಥಳದಲ್ಲೇ ಲಾರಿ ಚಾಲಕ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಆರೋಗ್ಯ ಸ್ವಾಮಿ ತಮಿಳುನಾಡಿನ ಪುದುಕೊಟ್ಟೈ ನಿವಾಸಿ. ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ಜಂಬೂ ಸವಾರಿಯಲ್ಲಿ ಆನೆ ಪಾಲ್ಗೊಂಡಿತ್ತು. ಜಂಬೂ ಸವಾರಿ ಬಳಿಕ ಆನೆಯನ್ನು ತಿರುಚ್ಚಿಗೆ ಲಾರಿಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಲಾರಿಯಲ್ಲಿ ಮಾವುತ ಸೇರಿದಂತೆ 6 ಜನರು ಇದ್ದರು. ಶಾನಮಾವು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ.

ಎರಡು ಕ್ರೇನ್ ಸಹಾಯದಿಂದ ಲಾರಿ ತೆರವುಗೊಳಿಸಲಾಗಿದೆ. ಲಾರಿಯಲ್ಲಿದ್ದ ಆನೆ ಸುರಕ್ಷಿತವಾಗಿದೆ. ಹೊಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular