HomeKarnatakaಜೈಲಿನ ಅವ್ಯವಸ್ಥೆ ಖಂಡಿಸಿ ಕೈದಿಗಳಿಂದ ಪ್ರತಿಭಟನೆ: ಓರ್ವ ಆತ್ಮಹತ್ಯೆಗೆ ಯತ್ನ

ಜೈಲಿನ ಅವ್ಯವಸ್ಥೆ ಖಂಡಿಸಿ ಕೈದಿಗಳಿಂದ ಪ್ರತಿಭಟನೆ: ಓರ್ವ ಆತ್ಮಹತ್ಯೆಗೆ ಯತ್ನ

ಧಾರವಾಡ: ಪ್ರತಿಭಟನೆಯ ವೇಳೆ ಜೈಲಿನಲ್ಲಿದ್ದ ಕೈದಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಅವ್ಯವಸ್ಥೆ ಖಂಡಿಸಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಕೈದಿಗಳೌ ಎಷ್ಟೇ ಪ್ರತಿಭಟಿಸಿದರೂ ಜೈಲಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಬೇಸತ್ತ ಕೈದಿಯೋರ್ವ ಫಿನಾಯಿಲ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾರಾಷ್ಟ್ರದ ಮೀರಜ್​​​ ಮೂಲದ ಮಹೇಶ್​ ಆತ್ಮಹತ್ಯೆಗೆ ಯತ್ನಿಸಿದ ಕೈದಿ. ವಿಷಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಕೈದಿ ಮಹೇಶ್ ನನ್ನು ​​ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೇ ಕೈದಿಗಳು ನರಕಯಾತನೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಜೈಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈದಿಗಳ ಪ್ರತಿಭಟನೆಗೆ ಜೈಲಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಇದರಿಂದ ಕೈದಿ ಮಹೇಶ್​ ಜೈಲಿನಲ್ಲಿ ಫಿನಾಯಿಲ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೊಲೆ ಪ್ರಕರಣವೊಂದರಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿರುವ ಮಹೇಶ್ ಫಿನಾಯಿಲ್​​ ಕುಡಿದಿದ್ದ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆಗುಂಡಿ ಅವಾಂತರಕ್ಕೆ ಬೈಕ್ ನಿಂದ ಬಿದ್ದ ಮಹಿಳೆಯ ಮೇಲೆ ಹರಿದ ಟಿಪ್ಪರ್ ಲಾರಿ: ಮಹಿಳೆಯ ಕಾಲು ಕಟ್

ಬಾಗಲಕೋಟೆ: ರಾಜ್ಯದಲ್ಲಿನ ರಸ್ತೆಗುಂಡಿಗಳ ಅವಾಂತರದಿಂದಾಗಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಗುಂಡಿ ಮುಚ್ಚುವ ಕೆಲಸವನ್ನು ಮಾತ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಗುಂಡಿ ಬಿದ್ದ ರಸ್ತೆಯು ಮತ್ತೊಂದು ಭೀಕರ ಅಪಘಾತಕ್ಕೆ ಕಾರಣವಗಿರುವ ಘತನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ರಬಕವಿಯಲ್ಲಿ ನಡೆದಿದೆ.

ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆ ಗುಂಡಿಯಿಂದಾಗಿ ಬೈಕ್ ನಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಹೀಗೆ ಬಿದ್ದ ಮಹಿಳೆಯ ಮೇಲೆಯೇ ಟಿಪ್ಪರ್ ಲಾರಿಯೊಂದು ಹರಿದು ಹೋಗಿದೆ. ಪರಿಣಾಮ ಮಹಿಳೆಯ ಕಾಲು ಕಟ್ ಆಗಿದೆ.

ಅಪಘಾತದ ಭೀಕರತೆಗೆ ಮಹಿಳೆಯ ಎಡಗಾಲು ಸಂಪೂರ್ಣವಾಗಿ ಕಟ್ ಆಗಿದ್ದು, ಮಹಿಳೆಯ ಸ್ಥಿತಿ ಗಂಭಿರವಾಗಿದೆ. ಮಹಿಳೆಯನ್ನು ರಬಕವಿಯ ತಬಸ್ಸುಮ್ ನದಾಫ್ (25) ಎಂದು ಗುರುತಿಸಲಾಗಿದೆ.

ತಬಸ್ಸುಮ್ ಅವರು ತಮ್ಮ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತು ತೆರಳುತ್ತಿದ್ದರು. ರಬಕವಿ ಪಟ್ಟಣದ ಚಿತ್ತರಗಿ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿದ್ದ ಬೃಹತ್ ತಗ್ಗು-ಗುಂಡಿಗೆ ಬೈಕ್ ಚಕ್ರ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ, ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ರಸ್ತೆಗೆ ಬಿದ್ದ ತಬಸ್ಸುಮ್ ಅವರ ಕಾಲಿನ ಮೇಲೆ ಹರಿದಿದೆ.

ಪರಿಣಾಮವಾಗಿ ಅವರ ಎಡಗಾಲು ತೀವ್ರವಾಗಿ ಜಜ್ಜಲ್ಪಟ್ಟು ಸಂಪೂರ್ಣವಾಗಿ ತುಂಡಾಗಿದೆ. ಈ ಭೀಕರ ಘಟನೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಗುಂಡಿ ಅವಾಂತರದಿಂದಾಗಿ ಮಹಿಳೆ ತನ್ನ ಕಾಲನ್ನೇ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular