HomeKarnatakaಮಗ ಮಾಡಿದ ತಪ್ಪಿಗೆ ತಂದೆ ಜೈಲಿಗೆ: ರೌಡಿಶೀಟರ್ ಪುತ್ರನಿಗೆ ಬಟ್ಟೆ ಕೊಡಲು ಬಂದ ತಂದೆಯ ಬ್ಯಾಗ್...

ಮಗ ಮಾಡಿದ ತಪ್ಪಿಗೆ ತಂದೆ ಜೈಲಿಗೆ: ರೌಡಿಶೀಟರ್ ಪುತ್ರನಿಗೆ ಬಟ್ಟೆ ಕೊಡಲು ಬಂದ ತಂದೆಯ ಬ್ಯಾಗ್ ನಲ್ಲಿ ಗಾಂಜಾ ಪತ್ತೆ

ಮಂಡ್ಯ: ಮಗ ಮಾಡಿದ ತಪ್ಪಿಗೆ ತಂದೆ ಜೈಲು ಪಾಲಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜೈಲಿನಲ್ಲಿದ್ದ ಮಗ ರೌಡಿಶೀಟರ್ ಮಧುಸೂದನ್ ನನ್ನು ನೋಡಲು ಬಂದ ತಂದೆ ಶಿವಣ್ಣ ಜೈಲು ಸೇರಿದ್ದಾರೆ.

ಜೈಲಿಗೆ ಹೊರಟಿದ್ದ ತಂದೆಗೆ ಸ್ನೇಹಿತ ತಂದು ಕೊಡುವ ಬಟ್ಟೆ ಬ್ಯಾಗ್ ತೆಗೆದುಕೊಂಡು ಬರುವಂತೆ ಮಧುಸೂದನ್ ಕರೆ ಮಾಡಿ ಹೇಳಿದ್ದಾನೆ. ಆತ ಕೊಟ್ಟ ಬಟ್ಟೆ ಬ್ಯಾಗ್ ತೆಗೆದುಕೊಂಡು ಮಗನನ್ನು ನೋಡಲು ಜೈಲಿಗೆ ಹೋಗಿದ್ದ ಶಿವಣ್ಣ ಅವರಿಗೆ ಅದರಲ್ಲಿ ಗಾಂಜಾ ಇರುವುದು ಗೊತ್ತಿರಲಿಲ್ಲ. ಜೈಲಿನ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬಟ್ಟೆ ಬ್ಯಾಗ್ ನಲ್ಲಿ ಗಾಂಜಾ ಇರುವುದು ಪತ್ತೆಯಾಗಿದ್ದು, ಕೂಡಲೇ ಶಿವಣ್ಣ ಅವರನ್ನು ಜೈಲಿನ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ

ಮಗನ ಮಾತು ಕೇಳಿ ತಂದೆ ಅಪರಿಚಿತನ ಬ್ಯಾಗ್ ತಂದಿದ್ದಾನೆ. ಆತ ಕೊಟ್ಟ ಬ್ಯಾಗ್ ನಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಮಗನನ್ನು ನೋಡಲು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಶಿವಣ್ಣ ತಾವೇ ಬಂಧನಕ್ಕೊಳಗಾಗಿದ್ದಾರೆ. ಶಿವಣ್ಣ ಮತ್ತು ಮಗ ಮಧುಸೂದನ ಒಂದೇ ಜೈಲಿನಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular