HomeLatest NewsBREAKING: 3,200 ಕೋಟಿ ರೂ. ಮದ್ಯ ಹಗರಣ: ಸಂಸದ ಮಿಥುನ್ ರೆಡ್ಡಿ ಅರೆಸ್ಟ್

BREAKING: 3,200 ಕೋಟಿ ರೂ. ಮದ್ಯ ಹಗರಣ: ಸಂಸದ ಮಿಥುನ್ ರೆಡ್ಡಿ ಅರೆಸ್ಟ್

ಅಮರಾವತಿ: ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ನಡೆದ 3,200 ಕೋಟಿ ರೂ.ಗಳ ಮದ್ಯ ಹಗರಣದಲ್ಲಿ ವೈಎಸ್‌ಆರ್‌ಸಿಪಿ ಲೋಕಸಭಾ ಸದಸ್ಯ ಪಿ.ವಿ. ಮಿಥುನ್ ರೆಡ್ಡಿ ಅವರನ್ನು ಆಂಧ್ರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆರೋಪಿತ ಮದ್ಯ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಹಲವು ಗಂಟೆಗಳ ಕಾಲ ಮಿಥುನ್ ರೆಡ್ಡಿ ಅವರನ್ನು ವಿಚಾರಣೆ ನಡೆಸಿ, ರಾತ್ರಿ ವಿಜಯವಾಡದಲ್ಲಿ ಬಂಧಿಸಿದೆ.

ಹೌದು ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಿಥುನ್ ರೆಡ್ಡಿ ಆಂಧ್ರಪ್ರದೇಶದ ರಾಜಂಪೇಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ವೈಎಸ್‌ಆರ್‌ಸಿಪಿ ನಾಯಕ ವಿಚಾರಣೆಗೆ ಹಾಜರಾಗಲು ವಿಜಯವಾಡಕ್ಕೆ ಆಗಮಿಸಿದ್ದು, ಇತರ ಆರೋಪಿಗಳಾದ ಧನುಂಜಯ ರೆಡ್ಡಿ, ಕೃಷ್ಣ ಮೋಹನ್ ರೆಡ್ಡಿ ಮತ್ತು ಬಾಲಾಜಿ ಗೋವಿಂದಪ್ಪ ಅವರನ್ನು ಬಂಧಿಸಿದ ನಂತರ ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಮಿಥುನ್ ರೆಡ್ಡಿ ವಿರುದ್ಧದ ಪ್ರಕರಣವು ದೊಡ್ಡ ಸೇಡಿನ ಪಿತೂರಿಯ ಭಾಗವಾಗಿದೆ ಎಂದು ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮಲ್ಲಾಡಿ ವಿಷ್ಣು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular