HomeLatest Newsನಿತೀಶ್ ರೆಡ್ಡಿಗೆ 'ಪುಷ್ಪ' ಸ್ಟೈಲ್‌ನಲ್ಲೇ ಸೆಂಡ್ ಆಫ್ ಕೊಟ್ಟ ರವೀಂದ್ರ ಜಡೇಜಾ: ಜಡ್ಡು ಆಟಿಟ್ಯೂಡ್‌ಗೆ ಇಂಟರ್ನೆಟ್...

ನಿತೀಶ್ ರೆಡ್ಡಿಗೆ ‘ಪುಷ್ಪ’ ಸ್ಟೈಲ್‌ನಲ್ಲೇ ಸೆಂಡ್ ಆಫ್ ಕೊಟ್ಟ ರವೀಂದ್ರ ಜಡೇಜಾ: ಜಡ್ಡು ಆಟಿಟ್ಯೂಡ್‌ಗೆ ಇಂಟರ್ನೆಟ್ ಫಿದಾ

ಮುಲ್ಲನ್‌ಪುರ: ಬುಧವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೈವೋಲ್ಟೇಜ್ ಎಲಿಮಿನೇಟರ್ (IPL Eliminator 2026) ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 47 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ತಂಡ ಸೆಮಿಫೈನಲ್ ಮಾದರಿಯ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ.

ಹೈದರಾಬಾದ್‌ನ ಕಿಲ್ಲರ್ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ವಿಕೆಟ್ ಉರುಳಿಸಿದ ಬೆನ್ನಲ್ಲೇ ರವೀಂದ್ರ ಜಡೇಜಾ (Ravindra Jadeja) ಮಾಡಿದ ಐಕಾನಿಕ್ ‘ಪುಷ್ಪ’ ಸ್ಟೈಲ್ ಬಾಡಿ ಲಾಂಗ್ವೇಜ್ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಐಪಿಎಲ್‌ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶೇರ್ ಆಗಿರುವ ಈ ವೀಡಿಯೋ ಕೇವಲ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದೆ.

ಜಡ್ಡು ಪುಷ್ಪ ಸಂಭ್ರಮ ವೈರಲ್:

ಪಂದ್ಯದ 11ನೇ ಓವರ್‌ನಲ್ಲಿ ಸನ್‌ರೈಸರ್ಸ್‌ನ ನಿತೀಶ್ ಕುಮಾರ್ ರೆಡ್ಡಿ (38 ರನ್) ವಿಕೆಟ್ ಪಡೆದ ರವೀಂದ್ರ ಜಡೇಜಾ, ಅವರ ಕಡೆ ನೋಡಿ ಐಕಾನಿಕ್ ‘ಪುಷ್ಪ’ ಶೈಲಿಯಲ್ಲಿ (ತಗ್ಗೇದೇ ಲೇ.) ಸಂಭ್ರಮಿಸಿದರು. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭೀಕರ ವೈರಲ್ ಆಗಿದೆ. ಜಡೇಜಾ 3 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಕಲೆಹಾಕಿದರು.

ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸಿಕ್ಸರ್ ಅಥವಾ ಅರ್ಧಶತಕ ಬಾರಿಸಿದಾಗ ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾದ ಮ್ಯಾನರಿಸಂ ಸನ್ನೆಗಳನ್ನು ಮಾಡಿ ಸಂಭ್ರಮಿಸುವುದು ಹವ್ಯಾಸ. ಈ ಪಂದ್ಯದಲ್ಲೂ ರೆಡ್ಡಿ ಅದೇ ಜೋಶ್‌ನಲ್ಲಿದ್ದರು. ಆದರೆ, ಯಾವಾಗ ವಿಕೆಟ್ ಬಿತ್ತೋ, ತಕ್ಷಣ ಜಡೇಜಾ ಅವರು ರೆಡ್ಡಿ ಕಡೆಗೆ ತಿರುಗಿ ನಿಂತು, ತಮ್ಮ ಗಡ್ಡದ ಕೆಳಗೆ ಕೈ ಆಡಿಸಿ ‘ಪುಷ್ಪ.. ತಗ್ಗೇದೇ ಲೇ’ ಎಂಬ ಐಕಾನಿಕ್ ಗೆಸ್ಚರ್ ತೋರಿಸಿ ಮಾಸ್ ಆಗಿ ಪೆವಿಲಿಯನ್‌ಗೆ ಸೆಂಡ್ ಆಫ್ ಮಾಡಿದರು

ಜಾಲಿ ಮೂಡ್‌ನಲ್ಲಿ ಅಭಿಮಾನಿಗಳು: ಮೈದಾನದಲ್ಲೇ ನಡೆದ ಜಡೇಜಾ ಅವರ ಈ ಸಿನಿಮಾ ಶೈಲಿಯ ರಿಯಾಕ್ಷನ್ ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಅಕ್ಷರಶಃ ಹುಚ್ಚೆದ್ದು ಕುಣಿದಿದ್ದಾರೆ. ಜಡ್ಡು ಅವರ ಈ ಇನ್ಸ್‌ಟಂಟ್ ಕೌಂಟರ್ ಸೆಲೆಬ್ರೇಷನ್‌ಗೆ ಸೋಶಿಯಲ್ ಮೀಡಿಯಾದಲ್ಲಿ ‘ಪಕ್ಕಾ ಮಾಸ್ ರಿವೇಂಜ್’ ಎಂಬ ಕಮೆಂಟ್‌ಗಳು ಹರಿದು ಬರುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular