HomeEntertainmentಶೂಟಿಂಗ್ ಪೂರ್ಣಗೊಳಿಸಿದ 'ಪೆಡ್ಡಿ' ಚಿತ್ರತಂಡ : ಜೂನ್ ತಿಂಗಳಲ್ಲೇ ಮೆಗಾ ಪವರ್ ಸ್ಟಾರ್ ಅಬ್ಬರ ಶುರು!

ಶೂಟಿಂಗ್ ಪೂರ್ಣಗೊಳಿಸಿದ ‘ಪೆಡ್ಡಿ’ ಚಿತ್ರತಂಡ : ಜೂನ್ ತಿಂಗಳಲ್ಲೇ ಮೆಗಾ ಪವರ್ ಸ್ಟಾರ್ ಅಬ್ಬರ ಶುರು!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ‘ಪೆಡ್ಡಿ’ ಚಿತ್ರದ ಚಿತ್ರೀಕರಣ ಇಂದು ಅಧಿಕೃತವಾಗಿ ಮುಕ್ತಾಯಗೊಂಡಿದೆ. ಬುಚ್ಚಿಬಾಬು ಸಾನ ನಿರ್ದೇಶನದ ಈ ಗ್ರಾಮೀಣ ಕ್ರೀಡಾ ಆಧಾರಿತ ಸಿನಿಮಾದ ಶೂಟಿಂಗ್ ಹಂತಕ್ಕೆ ಇಂದು ತೆರೆಬಿದ್ದಿದ್ದು, ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.

ಶ್ರುತಿ ಹಾಸನ್ ಜೊತೆ ಸ್ಪೆಷಲ್ ಸಾಂಗ್

ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನ ಶಾಂತಿಪಲ್ಲಿಯ ಒನ್ ಫಿಲ್ಮ್ ಸ್ಟೂಡಿಯೋದಲ್ಲಿ ಚಿತ್ರದ ಅದ್ದೂರಿ ಸೆಟ್‌ನಲ್ಲಿ ಶ್ರುತಿ ಹಾಸನ್ ಹಾಗೂ ರಾಮ್ ಚರಣ್ ನಡುವಿನ ವಿಶೇಷ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಹಾಡಿನ ಶೂಟಿಂಗ್ ಜೊತೆಗೆ ಇಡೀ ಸಿನಿಮಾದ ಚಿತ್ರೀಕರಣ ಮುಗಿದಿದೆ. ಇದಕ್ಕೂ ಮುನ್ನ ಸಣ್ಣಪುಟ್ಟ ಪ್ಯಾಚ್ ವರ್ಕ್ ಕೆಲಸಗಳನ್ನು ಚಿತ್ರತಂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ?

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ತೆರೆಕಾಣಬೇಕಿತ್ತು. ಆದರೆ ಆ ಚಿತ್ರದ ಬಿಡುಗಡೆ ಮುಂದೂಡಿಕೆಯಾಗಿರುವುದರಿಂದ, ಆ ದಿನಾಂಕದಂದೇ ‘ಪೆದ್ದಿ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೂನ್ 4 ಅಥವಾ ಜೂನ್ 25 ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ನಾಳೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಅದ್ದೂರಿ ತಾರಾಗಣ

ಈ ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಬೋಮನ್ ಇರಾನಿ, ಜಗಪತಿ ಬಾಬು ಹಾಗೂ ದಿವ್ಯೇಂದು ಶರ್ಮಾ ತಾರಾಗಣದಲ್ಲಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ವೃದ್ಧಿ ಸಿನಿಮಾಸ್, ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular