
ಮನೆಯೊಳಗೆ ಪಾರಿವಾಳ ಗೂಡು ಕಟ್ಟುವುದು ಅಶುಭದ ಸಂಕೇತ. ಇದ್ರಿಂದ ದೊಡ್ಡ ತೊಂದರೆ ಬರುತ್ತೆ ಎಂಬ ನಂಬಿಕೆ ಇದೆ. ಹಾಗಾಗಿ ಪಾರಿವಾಳದ ಗೂಡ ಕಂಡಲ್ಲಿ ತಕ್ಷಣ ತೆಗೆದು ಹಾಕಿ.
ಮನೆಯೊಳಗೆ ಜೇನು ಗೂಡುಕಟ್ಟಲು ಪ್ರಾರಂಭಿಸಿದರೆ ಅದು ಅಮಂಗಲ. ಕುಟುಂಬಸ್ಥರಿಗೆ ಅಪಘಾತವಾಗುವ ಸಂಭವವಿರುತ್ತದೆ.
ಜೇಡದ ಬಲೆಯನ್ನು ಆಗಾಗ ತೆಗೆದು ಹಾಕ್ತಾ ಇರಿ. ಇದರಿಂದ ತೊಡಕು ಹಾಗೂ ತೊಂದರೆಗಳು ಎದುರಾಗುತ್ತವೆ.
ಒಡೆದ ಗ್ಲಾಸುಗಳನ್ನು ಮನೆಯಲ್ಲಿಡಬೇಡಿ. ನಕಾರಾತ್ಮಕ ಶಕ್ತಿಗಳ ಬಲ ಹೆಚ್ಚಾಗುತ್ತದೆ.
ಮನೆಯೊಳಗೆ ಬಾವಲಿಗಳು ಬಂದ್ರೆ ತಕ್ಷಣ ಹೊರಗೆ ದಬ್ಬಿ.
ಮನೆಯ ಛಾವಣಿ ಮೇಲೆ ಬಟ್ಟೆ ಅಥವಾ ಅನುಪಯುಕ್ತ ವಸ್ತುಗಳನ್ನು ಇಡಬೇಡಿ.
ದೇವರ ಮನೆಯಲ್ಲಿ ಹಳೆ ಹೂವುಗಳನ್ನಿಡಬೇಡಿ.

