HomeLatest NewsMNC ಕೆಲಸಕ್ಕೆ ನೋ ಅಂದ ಎಂಜಿನಿಯರ್: ಕೇವಲ 1 ಕಾರಿನಿಂದ ಕ್ಯಾಬ್ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ...

MNC ಕೆಲಸಕ್ಕೆ ನೋ ಅಂದ ಎಂಜಿನಿಯರ್: ಕೇವಲ 1 ಕಾರಿನಿಂದ ಕ್ಯಾಬ್ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ ₹2 ಲಕ್ಷ ಗಳಿಸುತ್ತಿರೋ ಯುವಕನ ರೋಚಕ ಕಥೆ

ಮುಂಬೈ: ಇಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಮುಗಿಸಿದ ತಕ್ಷಣ ಬಹುತೇಕ ಯುವಕ-ಯುವತಿಯರು ಬಹುರಾಷ್ಟ್ರೀಯ ಕಂಪನಿಗಳಲ್ಲಿ (MNC) ಕ್ಯೂಬಿಕಲ್ ಒಳಗೆ ಕುಳಿತು 9 ರಿಂದ 5 ರ ಐಟಿ ಕೆಲಸ ಮಾಡಲು ಬಯಸುತ್ತಾರೆ. ಆದರೆ, ಅದೇ ಎಂಜಿನಿಯರಿಂಗ್ ಪದವಿ ಮುಗಿಸಿದ ಮುಂಬೈನ ಈ ಯುವಕ ಮಾತ್ರ ಕಾರ್ಪೊರೇಟ್ ಆಫೀಸ್ ಕೆಲಸವನ್ನು ಆಯ್ದುಕೊಳ್ಳದೆ, ಧೈರ್ಯದಿಂದ ಸ್ವಂತ ಉದ್ಯಮಕ್ಕೆ ಕೈಹಾಕಿದ್ದಾರೆ. ಕೇವಲ ಒಂದೇ ಒಂದು ಕಾರಿನಿಂದ ಟ್ರಾವೆಲ್ಸ್ ಬ್ಯುಸಿನೆಸ್ ಆರಂಭಿಸಿದ ಈ ಎಂಜಿನಿಯರ್, ಇಂದು ತಿಂಗಳಿಗೆ ಬರೋಬ್ಬರಿ ಎರಡು ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಯುವ ಪೀಳಿಗೆಗೆ ದೊಡ್ಡ ರೋಲ್ ಮಾಡೆಲ್ ಆಗಿದ್ದಾರೆ. ಸದ್ಯ ಈ ಯುವಕನ ಸಾಧನೆಯ ಯಶೋಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಯಾವ ಉದ್ಯೋಗವೂ ಮೇಲಲ್ಲ, ಕೀಳಲ್ಲ ಎನ್ನುವ ಮಾತಿಗೆ ಈ ಯುವಕನೇ ಸಾಕ್ಷಿ. ಸಂಬಳದ ಮೇಲೆ ಮಾತ್ರ ಅವಲಂಬಿತನಾಗಿ ಉಳಿಯುವ ಬದಲು, ತನ್ನದೇ ಆದ ಸ್ವಂತ ಬ್ಯುಸಿನೆಸ್ ಸಾಮ್ರಾಜ್ಯವನ್ನು ನಿರ್ಮಿಸಲು ಇವರು ತನ್ನ ಮೊದಲ ಕಾರನ್ನೇ ಯಶಸ್ಸಿನ ಅಡಿಪಾಯವಾಗಿಸಿಕೊಂಡು ಮುನ್ನುಗ್ಗಿದ್ದಾರೆ.

₹2 ಲಕ್ಷ ಆದಾಯ ಕೇಳಿ ಶಾಕ್ ಆದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್

ಇತ್ತೀಚೆಗೆ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಸೆಲೆಬ್ ಫ್ರೈಸೆನ್ (Caleb Friesen) ಅವರು ಮುಂಬೈನಲ್ಲಿ ಈ ಕ್ಯಾಬ್ ಚಾಲಕನ ಜೊತೆ ಪ್ರಯಾಣಿಸುವಾಗ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಉದ್ಯಮದ ಕುರಿತು ಆಸಕ್ತಿದಾಯಕ ಮಾತುಕತೆ ನಡೆಸಿದ್ದಾರೆ.

ಕ್ರಿಯೇಟರ್‌ಗೆ ಅಚ್ಚರಿ ಮೂಡಿಸಿದ ಉತ್ತರ: ಮಾತುಕತೆಯ ವೇಳೆ ಸೆಲೆಬ್ ಅವರು ಚಾಲಕನಿಗೆ ನಿಮ್ಮ ತಿಂಗಳ ಆದಾಯ ಎಷ್ಟು? ಎಂದು ಕೇಳಿದಾಗ, ಆತ ನೀಡಿದ ಪ್ರತಿಕ್ರಿಯೆ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ನಾನು ನನ್ನ ಈ ಕ್ಯಾಬ್ ಬ್ಯುಸಿನೆಸ್‌ನಿಂದ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಆತ ಹೆಮ್ಮೆಯಿಂದ ಹೇಳಿಕೊಂಡಾಗ ಸ್ವತಃ ಕಂಟೆಂಟ್ ಕ್ರಿಯೇಟರ್ ಶಾಕ್‌ಗೆ ಒಳಗಾಗಿದ್ದಾರೆ.

ಕಷ್ಟದ ಹಾದಿಯಲ್ಲೇ ಯಶಸ್ಸಿನ ಹುಡುಕಾಟ

ಮಾತುಕತೆಯ ಸಮಯದಲ್ಲಿ, ಚಾಲಕ ಕೇವಲ ಆದಾಯದ ಬಗ್ಗೆ ಮಾತ್ರವಲ್ಲದೆ ಅದರ ಹಿಂದಿರುವ ಪರಿಶ್ರಮದ ಬಗ್ಗೆಯೂ ಮಾತನಾಡಿದ್ದಾರೆ. “ಈ ಕೆಲಸ ಖಂಡಿತವಾಗಿಯೂ ಕಷ್ಟದಿಂದ ಕೂಡಿದೆ ಮತ್ತು ದೀರ್ಘಾವಧಿಯ ಸಮಯವನ್ನು ಬೇಡುತ್ತದೆ. ಆದರೆ, ಬೇರೊಬ್ಬರ ಕೈಕೆಳಗೆ ಕನಿಷ್ಠ ಸಂಬಳಕ್ಕೆ ದುಡಿಯುವ ಬದಲು, ಸ್ವಂತ ಕಾಲಿನ ಮೇಲೆ ನಿಂತು ಧೈರ್ಯದಿಂದ ಮುನ್ನುಗ್ಗಿದ್ದಕ್ಕೆ ಇಂದು ಈ ಯಶಸ್ಸು ಸಿಕ್ಕಿದೆ” ಎಂದು ಅವರು ಹಂಚಿಕೊಂಡಿದ್ದಾರೆ.

ಸ್ವಂತ ಉದ್ಯಮದಲ್ಲಿ ಯಶಸ್ಸು ಗಳಿಸಬೇಕೆಂಬ ಹಂಬಲ, ಕಠಿಣ ಪರಿಶ್ರಮ ಮತ್ತು ಸೂಕ್ತ ಮಾರುಕಟ್ಟೆಯ ಜ್ಞಾನವಿದ್ದರೆ ಎಂಜಿನಿಯರಿಂಗ್ ಪದವೀಧರರು ಕೇವಲ ಐಟಿ ಕಂಪನಿಗಳ ಮೇಲಷ್ಟೇ ಅವಲಂಬಿತರಾಗಬೇಕಿಲ್ಲ, ಬದಲಿಗೆ ತಾವೇ ಹತ್ತಾರು ಜನರಿಗೆ ಉದ್ಯೋಗದಾತರಾಗಬಹುದು ಎಂಬುದನ್ನು ಮುಂಬೈನ ಈ ಯುವಕ ಸಾಬೀತುಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular