ಬೆಂಗಳೂರು- ಐಸಿಸ್ (ISIS) ಉಗ್ರ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿರುವ ಜಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಬೆಂಗಳೂರು ವಲಯ ಕಚೇರಿಯು ನಗರದ 8 ವಿವಿಧ ಸ್ಥಳಗಳಲ್ಲಿ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002’ ರ ಅಡಿಯಲ್ಲಿ ಮಹತ್ವದ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
ಈ ಕಾರ್ಯಾಚರಣೆಯ ವೇಳೆ, ಆರೋಪಿತ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ, ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 17(1-A) ರ ಅಡಿಯಲ್ಲಿ ಒಟ್ಟು 7.50 ಲಕ್ಷ ರೂ. ಮೌಲ್ಯದ ‘ಅಪರಾಧದ ಆದಾಯ’ವನ್ನು (Proceeds of Crime) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಎನ್ಐಎ ಪ್ರಕರಣ ಮತ್ತು ಇಡಿ ತನಿಖೆ
ಇಕ್ರ್ರಾ ವೆಲ್ಫೇರ್ ಟ್ರಸ್ಟ್’, ‘ಗೈಡೆನ್ಸ್ ಫಾರ್ ಮ್ಯಾನ್‌ಕೈಂಡ್ (GFM) ಟ್ರಸ್ಟ್’ ಹಾಗೂ ಬೆಂಗಳೂರಿನ ಕೆಲವು ಪ್ರಮುಖ ವ್ಯಕ್ತಿಗಳು ಐಸಿಸ್ ಸಂಘಟನೆಯ ನೇಮಕಾತಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು. ಎನ್‌ಐಎ ತನಿಖೆಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ‘ಜಾರಿ ಪ್ರಕರಣದ ಮಾಹಿತಿ ವರದಿ’ (ECIR) ದಾಖಲಿಸಿ ಇದೀಗ ತನಿಖೆಯನ್ನು ತೀವ್ರಗೊಳಿಸಿದೆ.
ಎನ್ಐಎ ತನ್ನ ತನಿಖೆಯಲ್ಲಿ ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA)’ ಯ ಸೆಕ್ಷನ್ 17 (ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಿಸುವುದು), 18 (ಪಿತೂರಿ) ಹಾಗೂ 18B (ನೇಮಕಾತಿ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ತಲೆಮರೆಸಿಕೊಂಡಿರುವ ಮೊಹಮ್ಮದ್ ಶಿಹಾಬ್ (ಐಟಿ ವೃತ್ತಿಪರ) ಹೊರತುಪಡಿಸಿ, ಉಳಿದ ಆರೋಪಿಗಳ ವಿರುದ್ಧ ಎನ್‌ಐಎ ಈಗಾಗಲೇ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ.
ನೇಮಕಾತಿ ತಂತ್ರ ಮತ್ತು ಪಿತೂರಿ
ಎನ್ಐಎ ಮತ್ತು ಇಡಿ ತನಿಖೆಯಿಂದ ಬಹಿರಂಗಗೊಂಡಿರುವಂತೆ, ಆರೋಪಿಗಳು ಬೆಂಗಳೂರಿನಲ್ಲಿ ಸುಲಭವಾಗಿ ಪ್ರಭಾವಿತರಾಗಬಲ್ಲ ಮುಸ್ಲಿಂ ಯುವಕರನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ಪಿತೂರಿ ನಡೆಸಿದ್ದರು.
*ಮೂಲಭೂತವಾದದ ಜಾಲ*
*ಇಕ್ರಾ ಕ್ಯಾಂಪ್*
ಮುಸ್ಲಿಂ ಯುವಕರಿಗಾಗಿ “ವ್ಯಕ್ತಿತ್ವ ಅಭಿವೃದ್ಧಿ” ಕಾರ್ಯಾಗಾರಗಳನ್ನು ನಡೆಸುವುದು.
*ಕುರಾನ್ ಸರ್ಕಲ್:*
ಸಾಪ್ತಾಹಿಕ ಅಧ್ಯಯನ ವಲಯಗಳ ಮೂಲಕ ಯುವಕರನ್ನು ಗುರುತಿಸಿ ಮೂಲಭೂತವಾದದತ್ತ ಸೆಳೆಯುವುದು.
*ಸಿರಿಯಾಕ್ಕೆ ಅಕ್ರಮ ಪ್ರಯಾಣ*
ಹಣ ಸಂಗ್ರಹ ಮತ್ತು ಐಸಿಸ್ ಚಟುವಟಿಕೆ
ಟ್ರಸ್ಟ್‌ಗಳ ಮೂಲಕ, ವೈಯಕ್ತಿಕ ಉಳಿತಾಯದಿಂದ ಹಾಗೂ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ, ಟರ್ಕಿ ಮಾರ್ Aವ Now ಸಿರಿಯನ್ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಹೋರಾಡಲು ಯುವಕರ ಅಕ್ರಮ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದು.
ಹಾಗೆಯೇ, ಸಿಎಎ (CAA) ಮತ್ತು ಎನ್‌ಆರ್‌ಸಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಪ್ರಚೋದನೆ ನೀಡುವುದು ಹಾಗೂ ಎನ್‌ಕ್ರಿಪ್ಟ್ ಮಾಡಿದ ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವುದು ಇವರ ಮುಖ್ಯ ಉದ್ದೇಶವಾಗಿತ್ತು.
ಈ ಟ್ರಸ್ಟ್‌ಗಳ (ಇಕ್ರಾ ವೆಲ್ಫೇರ್ ಟ್ರಸ್ಟ್ ಮತ್ತು ಜಿಎಫ್‌ಎಂ ಟ್ರಸ್ಟ್) ಟ್ರಸ್ಟಿಗಳ ಮೂಲಕವೇ ದುರ್ಬಲ ವ್ಯಕ್ತಿಗಳ ನೇಮಕಾತಿಗೆ ಬೇಕಾದ ಹಣಕಾಸು ಹಾಗೂ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಡಿ ತನಿಖೆ ದೃಢಪಡಿಸಿದೆ.
ಪ್ರಸ್ತುತ ಪಿಎಂಎಲ್ಎ ಕಾಯ್ದೆಯಡಿ ಈ ಅಕ್ರಮ ಹಣ ವರ್ಗಾವಣೆ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
*ಪ್ರಮುಖ ಆರೋಪಿಗಳು ಪಾತ್ರ*
ಬಂಧಿತ ಆರೋಪಿಗಳ ವಿವರ
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್/ಐಎಸ್‌ಐಎಲ್/ಡಯೇಶ್ (ISIS/ISIL/Daesh) ನೊಂದಿಗೆ ನೇರ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಈ ಹಿಂದೆ ಹಲವರನ್ನು ಬಂಧಿಸಲಾಗಿತ್ತು:
ಇರ್ಫಾನ್ ನಾಸಿರ್ (ವ್ಯಾಪಾರಿ)
ಅಹಮದ್ ಅಬ್ದುಲ್ ಖಾದರ್ (ಖಾಸಗಿ ಬ್ಯಾಂಕ್ ಬಿಸಿನೆಸ್ ಅನಾಲಿಸ್ಟ್)
ಡಾ. ಮೊಹಮ್ಮದ್ ತೌಕೀರ್ ಮಹಮೂದ್ (KIMS ಬೆಂಗಳೂರಿನಿಂದ BDS ಪದವೀಧರ)
ಝುಹಾಬ್ ಹಮೀದ್ ಶಕೀಲ್ ಮನ್ನಾ ಅಲಿಯಾಸ್ ಝೊಹೈಬ್ ಮನ್ನಾ (ಐಟಿ ವೃತ್ತಿಪರ)

