HomeEntertainmentಮದುವೆಯಾದ ತಿಂಗಳೊಳಗೆ ಗರ್ಭಿಣಿಯಾದ್ರಾ ಸೋನಾಕ್ಷಿ ಸಿನ್ಹಾ ? ಅನುಮಾನ ಹುಟ್ಟುಹಾಕಿದೆ ಈ ವಿಡಿಯೋ...!

ಮದುವೆಯಾದ ತಿಂಗಳೊಳಗೆ ಗರ್ಭಿಣಿಯಾದ್ರಾ ಸೋನಾಕ್ಷಿ ಸಿನ್ಹಾ ? ಅನುಮಾನ ಹುಟ್ಟುಹಾಕಿದೆ ಈ ವಿಡಿಯೋ…!

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಕಳೆದ ತಿಂಗಳಷ್ಟೇ ಮದುವೆಯಾಗಿದ್ದಾರೆ. ಜಹೀರ್ ಇಕ್ಬಾಲ್ ಅವರನ್ನು ಮದುವೆಯಾದ ಸೋನಾಕ್ಷಿ ಸಿನ್ಹಾ, ಮದುವೆಯಾದ ಮರುದಿನವೇ ಆಸ್ಪತ್ರೆಗೆ ಬಂದಿದ್ದರು. ಆಗ ಗರ್ಭಿಣಿ ಎಂಬ ಸುದ್ದಿ ಹರಡಿತ್ತು. ಈಗ ಮತ್ತೊಮ್ಮೆ ಸೋನಾಕ್ಷಿ ಸಿನ್ಹಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ವೈರಲ್‌ ಆದ ವಿಡಿಯೋ.

ಹನಿಮೂನ್‌ ನಂತ್ರ ಸೋನಾಕ್ಷಿ ಸಿನ್ಹಾ ಅವರ ವೀಡಿಯೊ ವೈರಲ್ ಆಗುತ್ತಿದೆ. ಸೋನಾಕ್ಷಿ ತುಂಬಾ ಸಡಿಲವಾದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈಗ ಧರಿಸಿರುವ ಡ್ರೆಸ್, ಅನುಷ್ಕಾ ಶರ್ಮಾ, ನತಾಶಾ ಸ್ಟಾಂಕೋವಿಕ್, ಅನಿತಾ ಹಸಾನಂದನಿ ಅವರು ಗರ್ಭಾವಸ್ಥೆಯಲ್ಲಿ ಧರಿಸಿದ್ದಂತೆಯೇ ಇದೆ. ಹಾಗಾಗಿ ಇದು ಸೋನಾಕ್ಷಿ ಗರ್ಭಿಣಿ ಎನ್ನುವ ಅನುಮಾನ ಹುಟ್ಟುಹಾಕಿದೆ.

ಇದಲ್ಲದೆ, ಸೋನಾಕ್ಷಿ ಸಿನ್ಹಾ ನಡಿಗೆ ಕೂಡ ಅನುಮಾನ ಹುಟ್ಟುಹಾಕಿದೆ. ಅವರು ತುಂಬಾ ನಿಧಾನವಾಗಿ ನಡೆಯುತ್ತಿದ್ದು, ಪತಿ ಜಹೀರ್ ಇಕ್ಬಾಲ್ ಅವರ ಕೈ ಹಿಡಿದು ಎಚ್ಚರಿಕೆವಹಿಸುತ್ತಿದ್ದಾರೆ. ಮೆಟ್ಟಿಲು ಇಳಿಯುವಾಗ ಸೋನಾಕ್ಷಿ ತೆಗೆದುಕೊಂಡ ಎಚ್ಚರಿಕೆ ನೋಡಿ ಅಭಿಮಾನಿಗಳು ಸೋನಾಕ್ಷಿ ಗರ್ಭಿಣಿ ಎನ್ನುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular