HomeKarnatakaಗ್ಯಾಸ್ ಗೀಸರ್ ಸೋರಿಕೆ: ತಾಯಿ-ಮಗ ಮನೆಯಲ್ಲೇ ದುರ್ಮರಣ

ಗ್ಯಾಸ್ ಗೀಸರ್ ಸೋರಿಕೆ: ತಾಯಿ-ಮಗ ಮನೆಯಲ್ಲೇ ದುರ್ಮರಣ

ರಾಮನಗರ: ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜ್ಯೂರಿನಗರದಲ್ಲಿ ನಡೆದಿದೆ.

ಮನೆಯಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿದ್ದು, ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ನಿಂದ ತಾಯಿ ಹಾಗೂ ಮಗ ಇಬ್ಬರೂ ಮೃತಪಟ್ಟಿದ್ದಾರೆ.

ಶೋಭಾ (40) ಹಾಗೂ ಅವರ ಪುತ್ರ ದಿಲೀಪ್ (17) ಮೃತ ದುರ್ದೈವಿಗಳು. ಗೀಸರ್ ಸ್ವಿಚ್ ಆನ್ ಮಾಡಿ ದಿಲೀಪ್ ಸ್ನಾನಕ್ಕೆ ತೆರಳಿದ್ದ ವೇಳೆ ಗೀಸರ್ ನಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಸ್ನಾನದ ಮನೆಯಲ್ಲಿ ಕಿಟಕಿ ಇಲ್ಲದ ಕಾರಣ ವಿಷಾನೀಲ ಬಾತ್ ರೂಮ್ ಆವರಿಸಿದ್ದು ದಿಲೀಪ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗ ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದ ತಾಯಿ ಶೋಭಾ ಕೂಡ ಅಸ್ವಸ್ಥರಾಗಿದ್ದಾರೆ. ಸ್ಥಳೀಯರಿಗೆ ವಿಷಯ ಗೊತ್ತಾಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಈ ವೇಳೆ ಶೋಭಾ ಕೂಡ ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular