HomeHealthಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಇದೆಯಾ ಆರೋಗ್ಯಕ್ಕೆ ಲಾಭ....?

ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಇದೆಯಾ ಆರೋಗ್ಯಕ್ಕೆ ಲಾಭ….?

ಹೆಚ್ಚಿನವರು ಬೆಳಿಗ್ಗೆಯನ್ನು ಕಾಫಿ ಕುಡಿಯುವುದರ ಮೂಲಕ ಶುರು ಮಾಡುತ್ತಾರೆ. ಟೀ ಹೋಲಿಸಿದರೆ ಕಾಫಿ ಆರೋಗ್ಯಕ್ಕೆ ಉತ್ತಮ. ಆದರೆ ಅದನ್ನು ಅತಿಯಾಗಿ ಸೇವಿಸಬಾರದು. ಹಾಗೇ ತೂಕ ಇಳಿಸಲು ಬಯಸುವವರು ಬ್ಲ್ಯಾಕ್ ಕಾಫಿಯನ್ನು ಸೇವಿಸಬಹುದು ಎನ್ನಲಾಗಿದೆ.

*ಕಾಫಿಯಲ್ಲಿರುವ ಕೆಫೀನ್ ಅಂಶ ಚಯಾಪಚಯ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕ್ಯಾಲೋರಿಯನ್ನು ಸುಡುತ್ತದೆ. ಕೆಫೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

*ಕಾಫಿ ಹಸಿವನ್ನು ನಿಗ್ರಹಿಸುತ್ತದೆ. ಹಸಿವು ಹೆಚ್ಚಿಸುವ ಹಾರ್ಮೋನ್ ಗಳ ವಿರುದ್ಧ ಇದು ಹೋರಾಡುತ್ತದೆ. ಹಸಿವು ಕಡಿಮೆಯಾಗುವುದರಿಂದ ನೀವು ತಿನ್ನುವ ಪ್ರಮಾಣ ಕಡಿಮೆಯಾಗಿ ತೂಕ ನಷ್ಟವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುವ ಹೆಚ್ಚುವರಿ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡುವಂತೆ ಪ್ರೇರೆಪಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular