HomeInternationalಮೈತುಂಬಾ ಸಾಲ, ಇರಾನ್ ಯುದ್ಧ ಸಂಧಾನದ ಹೆಸರಲ್ಲಿ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನ? Iran Conflict

ಮೈತುಂಬಾ ಸಾಲ, ಇರಾನ್ ಯುದ್ಧ ಸಂಧಾನದ ಹೆಸರಲ್ಲಿ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನ? Iran Conflict

ಪ್ರಪಂಚದ ಮೂಲೆ ಮೂಲೆಯಲ್ಲೂ ಕೆಟ್ಟ ಹೆಸರು ಪಡೆದ ಒಂದೇ ಒಂದು ದೇಶ ಎಂದರೆ ಅದು ಪಾಕಿಸ್ತಾನ, ಏಕೆಂದರೆ ಉಗ್ರ ಪೋಷಕ ಪಾಕಿಸ್ತಾನ ಪದೇ ಪದೇ ಜಾಗತಿಕ ಮಟ್ಟದಲ್ಲಿ ಮಾನ ಕಳೆದುಕೊಂಡು ಒದ್ದಾಡಿರುವ ಉದಾಹರಣೆಗಳು ಇವೆ. ಅದರಲ್ಲೂ ಅಮೆರಿಕ ರೀತಿಯ ದೇಶಗಳು ಪಾಕಿಸ್ತಾನದ ನಾಯಕರನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಬಳಸುತ್ತಾ ಬಂದಿವೆ. ಹೀಗಿದ್ದಾಗಲೇ ಮೈತುಂಬಾ ಸಾಲ, ಇರಾನ್ ಯುದ್ಧ ಸಂಧಾನದ ಹೆಸರಲ್ಲಿ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನ? ಅಮೆರಿಕ ಹಾಗೂ ಇಸ್ರೇಲ್ ಸೇನೆಗಳಿಗೆ ಸಹಾಯ ಮಾಡುತ್ತಿದೆಯಾ ಪಾಕ್? ಬನ್ನಿ ತಿಳಿಯೋಣ.

ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 1 ತಿಂಗಳು ಕಳೆದು ಹೋಗಿದ್ದು, ಇದೀಗ 2ನೇ ತಿಂಗಳಿಗೆ ಎಂಟ್ರಿಕೊಟ್ಟ ಯುದ್ಧ ಇನ್ನಷ್ಟು ಭಯಾನಕ ಸ್ವರೂಪ ಪಡೆಯುತ್ತಿದೆ. ಅದರಲ್ಲೂ ಯುದ್ಧದ ಭೀಕರತೆಗೆ ಈಗಾಗಲೇ ಸಾವಿರಾರು ಜನರು ಜೀವ ಬಿಟ್ಟಿದ್ದು, ಮಧ್ಯಪ್ರಾಚ್ಯ ಪರಿಸ್ಥಿತಿ ಇನ್ನಷ್ಟು ಘೋರವಾಗಿದೆ. ಯಾವ ಸಮಯದಲ್ಲಿ ಪರಮಾಣು ಅಸ್ತ್ರ ಬಳಕೆ ಮಾಡುತ್ತಾರೋ ಎಂಬ ಆತಂಕ ಮೂಡಿದೆ. ಇಂತಹ ಸೂಕ್ಷ್ಮ ಸಮಯದಲ್ಲೇ ಸಂಧಾನ ಮಾಡಿಸುವ ನೆಪದಲ್ಲಿ ಮುಂದೆ ಬಂದಿದ್ದ ಪಾಕಿಸ್ತಾನ, ದುಡ್ಡಿಗಾಗಿ ಎಂತಹ ಹಾದಿ ಹಿಡಿದಿತ್ತು ಗೊತ್ತೇ? ಇರಾನ್ ಕೂಡ ಪಾಕಿಸ್ತಾನದ ನಾಯಕರನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಿದ್ದು, ಸಂಧಾನದ ಮಾತು ಮರೀಚಿಕೆಯಾಗಿದೆ.

ಅಮೆರಿಕ & ಇಸ್ರೇಲ್ ಸೇನೆಗಳಿಗೆ ಪಾಕ್ ಸಹಾಯ?
ಹೌದು, ಈಗಾಗಲೇ ಪಾಕಿಸ್ತಾನ ನಾಯಕರು ಇರಾನ್ ಜೊತೆಗೆ ಹಲವು ಬಾರಿ ಸಂಧಾನ ಮಾತುಕತೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಇದೇ ಪಾಕಿಸ್ತಾನದ ನಾಯಕರು ಸಂಧಾನದ ನೆಪದಲ್ಲಿ ಇರಾನ್ ದೇಶದ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸಿ, ಆ ಮೂಲಕ ಇರಾನ್ ನಾಯಕರು ಅಡಗಿರುವ ರಹಸ್ಯ ಸ್ಥಳದ ಮಾಹಿತಿಯನ್ನು ಇಸ್ರೇಲ್ & ಅಮೆರಿಕದ ಸೇನೆಗಳಿಗೆ ತಿಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಪೈಕಿ ಹಣಕ್ಕಾಗಿಯೇ ಪಾಕಿಸ್ತಾನದ ನಾಯಕರು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂಬ ಆರೋಪವು ಮತ್ತಷ್ಟು ಸಂಚಲನಕ್ಕೆ ಕೂಡ ಕಾರಣವಾಗಿದೆ. ಇರಾನ್ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನ ನಾಯಕರು ಹಾಗೂ ಸಂಧಾನ ನಡೆಸಲು ಸಿದ್ಧವಾಗಿರುವ ಪಾಕ್ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ ಎಂಬ ಸುದ್ದಿ ಇದೀಗ ಹಲ್‌ಚಲ್ ಎಬ್ಬಿಸಿದೆ. ಹಾಗೇ ಇರಾನ್ ಸೇನೆಯನ್ನ ಸುಲಭವಾಗಿ ಸೋಲಿಸಬಹುದು ಎಂಬ ಅಮೆರಿಕದ ಲೆಕ್ಕಾಚಾರ ಈಗ ಉಲ್ಟಾ ಹೊಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮೆರಿಕದ ಯುದ್ಧ ವಿಮಾನಗಳು ಉಡೀಸ್!
ಇರಾನ್ ಸೇನೆ ಮತ್ತೊಂದು ಕಡೆ ತನ್ನ ಬಳಿ ಇರುವ ಅತ್ಯಲ್ಪ ಅಸ್ತ್ರಗಳನ್ನೇ ಬಳಸಿಕೊಂಡು ಅಮೆರಿಕ ಸೇನೆಯ ಹುಟ್ಟಡಗಿಸುವ ಕೆಲಸ ಮಾಡುತ್ತಿದೆ. ಅದ್ರಲ್ಲೂ F-35 ಎಂಬ ದೈತ್ಯ ಹಾಗೂ ಬಲಿಷ್ಠ ಯುದ್ಧ ವಿಮಾನವನ್ನೇ ಉಡಾಯಿಸಿದೆ ಇರಾನ್ ಸೇನೆ. F-35 ಫೈಟರ್ ಜೆಟ್ ಬೆಲೆ ಬರ್ಜರಿ 82 ಮಿಲಿಯನ್ ಅಮೆರಿಕನ್ ಡಾಲರ್ ಮೂಲಕ ಆರಂಭವಾಗಿ, ಭರ್ಜರಿ 100 ಮಿಲಿಯನ್ ಡಾಲರ್ ತನಕ ಮುಟ್ಟುತ್ತದೆ. ಭಾರತದ ರೂಪಾಯಿ ಲೆಕ್ಕದಲ್ಲಿ 900 ಕೋಟಿ ರೂಪಾಯಿ ಆಸುಪಾಸು ವೆಚ್ಚವಾಗುತ್ತದೆ F-35 ಯುದ್ಧ ವಿಮಾನಗಳಿಗೆ. ಇಂತಹ ಪರಿಸ್ಥಿತಿಯಲ್ಲಿ ಇರಾನ್‌ನ ಸೇನೆ ತನ್ನ ಬಳಿ ಇರುವ ಸುಮಾರು 15 ರಿಂದ 20 ಲಕ್ಷ ವೆಚ್ಚದ ಶಾಹೀದ್ ಡ್ರೋನ್‌ಗಳನ್ನೇ ಬಳಸಿಕೊಂಡು ಅಮೆರಿಕ ಸೇನೆಯ ಯುದ್ಧ ವಿಮಾನಗಳನ್ನು ಹೊಡೆದು ಹೊಡೆದು ಉರುಳಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್‌ನ ಮೇಲೆ ಕೂಡ ಇರಾನ್ ಸೇನೆ ತನ್ನ ಬಲಿಷ್ಠ ಕ್ಷಿಪಣಿಗಳ ಮೂಲಕ ದಾಳಿ ನಡೆಸುತ್ತಿದ್ದು, ಭವಿಷ್ಯದ ಬಗ್ಗೆ ಈಗ ಚಿಂತೆ ಶುರುವಾಗಿದೆ ಮಧ್ಯಪ್ರಾಚ್ಯದ ಜನರಿಗೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular