HomeLatest NewsIPS ಪ್ರೊಬೇಷನರ್ ಮೇಲೆ ಲೈಂಗಿಕ ಕಿರುಕುಳ ಆರೋಪ: ಆತ್ಮಹತ್ಯೆ ಯತ್ನ ಮಾಡಿದ ಸಹ ಅಧಿಕಾರಿ

IPS ಪ್ರೊಬೇಷನರ್ ಮೇಲೆ ಲೈಂಗಿಕ ಕಿರುಕುಳ ಆರೋಪ: ಆತ್ಮಹತ್ಯೆ ಯತ್ನ ಮಾಡಿದ ಸಹ ಅಧಿಕಾರಿ

ಹೈದರಾಬಾದ್-ದೇಶದ ಪ್ರತಿಷ್ಠಿತ ತರಬೇತಿ ಕೇಂದ್ರವಾದ ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (SVPNPA) ತರಬೇತಿ ಪಡೆಯುತ್ತಿರುವ ಇಬ್ಬರು ಐಪಿಎಸ್ (IPS) ಪ್ರೊಬೇಷನರಿ ಅಧಿಕಾರಿಗಳ ನಡುವಿನ ತೀವ್ರ ವಿವಾದ ಕಠಿಣ ಕಾನೂನು ಸಮರ ಹಾಗೂ ಆತ್ಮಹತ್ಯೆ ಯತ್ನದ ರೂಪ ಪಡೆದುಕೊಂಡಿದೆ.

ಆತ್ಮಹತ್ಯೆ ಯತ್ನ ಮತ್ತು ಆಸ್ಪತ್ರೆ ದಾಖಲು

ತನ್ನ ಮೇಲೆ ಗಂಭೀರ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಲಾದ ಬೆನ್ನಲ್ಲೇ, ಐಪಿಎಸ್ ತರಬೇತುದಾರ ಉದಯ್ ಕೃಷ್ಣ ರೆಡ್ಡಿ ನಗರದ ತಮ್ಮ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸದ್ಯ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತೀವ್ರ ನಿಗಾದಲ್ಲಿದ್ದಾರೆ. ಪೊಲೀಸ್ ಅಕಾಡೆಮಿಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ಹಿನ್ನೆಲೆ:

ಪ್ರಕರಣದ ಹಿನ್ನೆಲೆ

30 ವರ್ಷದ ಸಹ ಐಪಿಎಸ್ ಪ್ರೊಬೇಷನರಿ ಅಧಿಕಾರಿಯೊಬ್ಬರು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಉದಯ್ ಕೃಷ್ಣ ರೆಡ್ಡಿ ಅವರಿಂದ ತನಗೆ ನಿರಂತರ ಕಿರುಕುಳ ಅನುಭವಿಸಬೇಕಾಯಿತು ಎಂದು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದರು.

ರೆಡ್ಡಿ ತಮ್ಮ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಪಡೆದು ಖಾಸಗಿ ಚಾಟ್‌ಗಳನ್ನು ಪರಿಶೀಲಿಸಿದ್ದಲ್ಲದೆ, ವಾಟ್ಸಾಪ್‌ನಲ್ಲಿ ಲೈಂಗಿಕ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆ ಹಾಗೂ ಇತರೆ ಪ್ರೊಬೇಷನರ್ಸ್‌ಗಳ ಮುಂದೆ ಗೌರವಕ್ಕೆ ಧಕ್ಕೆ ತರುವಂತೆ ಮಾತನಾಡಿದ್ದಾರೆ.

ಜೂನ್‌ನಲ್ಲಿ ತಡೆದು ನಿಲ್ಲಿಸಿ, ಕೋಣೆಗೆ ಬಲವಂತವಾಗಿ ಕರೆದೊಯ್ದು ಕೂದಲನ್ನು ಎಳೆದು, ಕತ್ತು ಹಿಸುಕಲು ಯತ್ನಿಸಿದ್ದಲ್ಲದೆ, ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದಾರೆ. ಜೊತೆಗೆ ಕಾಂಡೋಮ್ ಪ್ಯಾಕೆಟ್‌ಗಳನ್ನು ಎಸೆದು ಹಂದೆಗೆಟ್ಟಿದ್ದಾರೆ. ಜುಲೈ 10 ರಂದು ಮತ್ತೆ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾರೆ.

ಒಪ್ಪಿಗೆಯಿಲ್ಲದೆ ತನ್ನ ಖಾಸಗಿ ವೀಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅದನ್ನು ತನ್ನ ಪತಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ಗಂಭೀರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆಗೆ ಆಕೆಯ ಪತಿ ಹಾಗೂ ಶ್ರೇಯಾ ರಾಮ್ ಕಪೂರ್ ಬೆಂಬಲ ಸೂಚಿಸಿದ್ದಾರೆ.

‘ಅವಳೇ ಬಲವಂತ ಮಾಡಿದಳು’: ಡೆತ್ ನೋಟ್‌ನಲ್ಲಿ ರೆಡ್ಡಿ ಸ್ಪಷ್ಟನೆ

‘ಅವಳೇ ಬಲವಂತ ಮಾಡಿದಳು’: ಡೆತ್ ನೋಟ್‌ನಲ್ಲಿ ರೆಡ್ಡಿ ಸ್ಪಷ್ಟನೆ

ಆಸ್ಪತ್ರೆಗೆ ದಾಖಲಾಗುವ ಮುನ್ನ ಉದಯ್ ಕೃಷ್ಣ ರೆಡ್ಡಿ ಬರೆದಿಟ್ಟಿದ್ದಾರೆ ಎನ್ನಲಾದ ಎರಡು ಪುಟಗಳ ಆತ್ಮಹತ್ಯೆ ಪತ್ರ (Death Note) ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ರೆಡ್ಡಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ:

ಡೆತ್ ನೋಟ್‌ನಲ್ಲೇನಿದೆ?

“ನನ್ನ ಮತ್ತು (ಆರೋಪ ಮಾಡಿದ ಮಹಿಳೆ) ನಡುವೆ ಜೂನ್ 2025 ರಿಂದ ಭಾವನಾತ್ಮಕ ಹಾಗೂ ದೈಹಿಕ ಸಂಬಂಧವಿತ್ತು. ಆಕೆಗೆ ಮದುವೆಯಾದ ಮೇಲೆಯೂ ಸಂಬಂಧ ಮುಂದುವರಿಸಲು ಒತ್ತಾಯಿಸುತ್ತಿದ್ದಳು. ನನ್ನ ಆಕ್ಷೇಪಣೆಯ ಹೊರತಾಗಿಯೂ ಆಕೆ ನನ್ನ ಕೋಣೆಗೆ ಬಂದು ಜಗಳವಾಡುತ್ತಿದ್ದಳು.

ಜುಲೈ 9 ರಂದು ಆಕೆ ಸ್ವತಃ ನನ್ನ ಕೋಣೆಗೆ ಬಂದು, ನನ್ನ ಒಪ್ಪಿಗೆಯಿಲ್ಲದೆ ನನಗೆ ಮುತ್ತಿಟ್ಟು ಅಪ್ಪಿಕೊಂಡಳು. ನನ್ನ ಮೇಲಿನ ಸ್ವಯಂ ರಕ್ಷಣೆಗಾಗಿ ಮತ್ತು ಸಾಕ್ಷ್ಯಕ್ಕಾಗಿ ನಾನು ಅದನ್ನು ರೆಕಾರ್ಡ್ ಮಾಡಿ ಆಕೆಯ ಪತಿಗೆ ಕಳುಹಿಸಿದೆ. ಈಗ ಆಕೆ ಮತ್ತು ಆಕೆಯ ಸ್ನೇಹಿತರು ಸೇರಿ ಸತ್ಯವನ್ನು ಮರೆಮಾಚಿ ನನ್ನ ಮೇಲೆ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ತಮ್ಮ ವಿರುದ್ಧ ಸುಳ್ಳು ದೂರು ನೀಡಲು ಪ್ರಚೋದಿಸಿದ ಮಹಿಳೆ, ಆಕೆಯ ಪತಿ ಹಾಗೂ ಇಬ್ಬರು ಸ್ನೇಹಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೆಡ್ಡಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತನಿಖೆ ಚುರುಕು

ಪ್ರಸ್ತುತ ಈ ಘಟನೆ ಇಡೀ ಐಪಿಎಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹೈದರಾಬಾದ್ ಪೊಲೀಸರು ಎರಡೂ ಕಡೆಯವರು ನೀಡಿದ ಡಿಜಿಟಲ್ ಸಾಕ್ಷ್ಯಗಳು (ವಾಟ್ಸಾಪ್ ಚಾಟ್‌ಗಳು, ವೀಡಿಯೊ ರೆಕಾರ್ಡಿಂಗ್‌ಗಳು) ಮತ್ತು ಆತ್ಮಹತ್ಯೆ ಪತ್ರವನ್ನು ವಶಕ್ಕೆ ಪಡೆದು ಸುಡುವಾಳಾಗಿ ತನಿಖೆ ನಡೆಸುತ್ತಿದ್ದಾರೆ.

ಸದ್ಯ ಸಂಗ್ರಹಿಸಲಾದ ವೈಜ್ಞಾನಿಕ ಸಾಕ್ಷ್ಯಾಧಾರಗಳು ಮತ್ತು ತಾಂತ್ರಿಕ ತನಿಖೆಯ ಆಧಾರದ ಮೇಲೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು

ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(Disclaimer):

ಈ ಸುದ್ದಿಯಲ್ಲಿ ಉಲ್ಲೇಖಿಸಲಾದ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳು ಸಂಬಂಧಿತ ದೂರುಗಳು ಹಾಗೂ ಮಾಧ್ಯಮ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಆರೋಪಗಳ ಕುರಿತು ಅಂತಿಮ ತೀರ್ಪು ಅಥವಾ ಅಧಿಕೃತ ತನಿಖಾ ವರದಿ ಇನ್ನೂ ಹೊರಬಂದಿಲ್ಲ. ಸುದ್ದಿಯಲ್ಲಿ ಉಲ್ಲೇಖಿಸಿರುವ ವ್ಯಕ್ತಿ ಡೆತ್ ನೋಟ್‌ನಲ್ಲಿ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿರುವುದಾಗಿ ವರದಿಯಾಗಿದೆ. ಓದುಗರು ಈ ಸುದ್ದಿಯನ್ನು ತನಿಖೆ ಪ್ರಗತಿಯಲ್ಲಿರುವ ಪ್ರಕರಣವೆಂದು ಪರಿಗಣಿಸಬೇಕು.

ಆತ್ಮಹತ್ಯೆ ತಡೆ ಸಹಾಯ:
ನೀವು ಅಥವಾ ನಿಮಗೆ ಪರಿಚಯವಿರುವ ಯಾರಾದರೂ ಭಾವನಾತ್ಮಕ ಸಂಕಷ್ಟ ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿದ್ದರೆ, ದಯವಿಟ್ಟು ತಕ್ಷಣವೇ ನಿಮ್ಮ ಕುಟುಂಬದವರು, ಸ್ನೇಹಿತರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಮಯೋಚಿತ ನೆರವು ಜೀವ ಉಳಿಸಬಹುದು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular