ಬೆಂಗಳೂರು: ಐಪಿಎಲ್ ಪಂದ್ಯ ಬೇರೆಡೆ ಶಿಫ್ಟ್ ಆಗಲಿದೆ ಎಂಬ ಚರ್ಚೆಯ ನಡುವೆಯೇ ಕ್ರಿಕೆಟ್ ಆಭಿಮಾನಿಗಳಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಐಪಿಎಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿಯೇ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್ ಪಂದ್ಯ ನಡೆಸಲು ಕೆ.ಎಸ್.ಸಿ.ಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ)ಗೆ ಆರ್.ಸಿಬಿ ಕೆಲ ಷರತ್ತುಗಳನ್ನು ಹಾಕಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ. ಐಪಿಎಲ್ ಪಂದ್ಯ ಆಡಲು ಸಿಸಿಟಿವಿ ಕಣ್ಗಾವಲು ಇರಬೇಕು. ಆರ್ ಸಿಬಿ ಪ್ರೇಕ್ಷಕರ ಸುರಕ್ಷತೆಗೆ ಮಹತ್ವಕೊಡಬೇಕು ಎಂದು ತಿಳಿಸಿದೆ.
ಈ ನಿಟ್ಟಿನಲ್ಲಿ ಆರ್. ಸಿ.ಬಿ ಮ್ಯಾನೇಜ್ಮೆಂಟ್ ಕೆ.ಎಸ್.ಸಿ.ಎಗೆ ಕೆಲ ಕಂಡಿಷನ್ ಕುರಿತು ಪೋಸ್ಟ್ ಮಾಡಿದೆ. ಕ್ರೀಡಾಂಗಣದ ಸುತ್ತ ಎಐ ಕ್ಯಾಮರಾಗಳನ್ನು ಅಳವಡಿಸಬೇಕು. 300ರಿಂದ 350 ಎಐ ಕ್ಯಾಮರಾ ಅಳವಡಿಕೆ ಕಡ್ಡಾಯ. ಪ್ರೇಕ್ಷಕರ ಸರತಿ ಸಾಲು ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಐಪಿಎಲ್ ಗೆ ಸಿಸಿಟಿವಿ ಕಣ್ಗಾವಲು ಅಗತ್ಯ. ಈ ನಿಟ್ಟಿನಲ್ಲಿ 4.5ಕೋಟಿ ಭರಿಸುವುದಾಗಿ ಆರ್ ಸಿಬಿ ತಿಳಿಸಿದೆ. ಈ ಮೂಲಕ ಐಪಿಎಲ್ ಬೆಂಗಳೂರಿನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

