ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಅಭಿಮಾನಿಯೊಬ್ಬರಿಗೆ ಮುಂಬೈ ಇಂಡಿಯನ್ಸ್ ಬೆಂಬಲಿಗನೊಬ್ಬ ಪ್ರಪೋಸ್ ಮಾಡಿದ್ದಾನೆ.
ಈ ವೇಳೆ ಕ್ಷಣಾರ್ಧದಲ್ಲಿ ನಿಶ್ಚಿತಾರ್ಥದ ಉಂಗುರ ಅವನ ಕೈಯಿಂದ ಜಾರಿದ ನಂತರ ಸ್ವಲ್ಪ ಸಮಯ ಗೊಂದಲ ಉಂಟಾಗಿತ್ತು. ಕೆಲ ಸಮಯದ ನಂತರದಲ್ಲಿ ಉಂಗುರ ಸಿಕ್ಕಿದ್ದು, ಪ್ರೇಮ ನಿವೇದನೆ ಪ್ರಸಂಗ ಮುಂದುವರೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಲ್ಲಿ, ವಾಂಖೆಡೆ ಸ್ಟ್ಯಾಂಡ್ ನಲ್ಲಿ KKR ಅಭಿಮಾನಿಗೆ MI ಅಭಿಮಾನಿ ಮಂಡಿಯೂರಿ ಪ್ರಪೋಸ್ ಮಾಡುವಾಗ ಆಯತಪ್ಪಿ ಉಂಗುರ ಕೆಳಗೆ ಬಿದ್ದಿದೆ. ಪ್ರಪೋಸ್ ಮಾಡಲು ಮುಂದಾಗುತ್ತಿದ್ದಂತೆ ಉಂಗುರ ಬಿದ್ದು, ಆಸನಗಳ ಸಾಲಿನಲ್ಲಿ ಮರೆಯಾಗಿದ್ದು, ಅಲ್ಲಿದವರು ಹುಡುಕಾಟ ನಡೆಸಿದ್ದಾರೆ. ಕೆಲವು ಸೆಕೆಂಡುಗಳ ಹಡುಕಾಟದ ನಂತರ ಉಂಗುರ ಕಂಡುಬಂದಿತು, ನಂತರ ನಗುವಿನೊಂದಿಗೆ ಪ್ರೇಮ ಪ್ರಸ್ತಾಪವು ಪುನರಾರಂಭವಾಯಿತು. ಸ್ಮರಣೀಯವಾದ ಘಟನೆಗೆ ಸಾಕ್ಷಿಯಾಯಿತು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಸ್ಪರ್ಧೆಯ ಹೊರತಾಗಿಯೂ ಈ ಕ್ಷಣ ಅಲ್ಲಿದ್ದವರನ್ನು ಸೆಳೆದಿದೆ. ವಿಡಿಯೋ ವೈರಲ್ ಆಗಿದೆ.

