ನಿನ್ನೆ ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಅಮೋಘ ಗೆಲುವು ದಾಖಲಿಸಿತು.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಈ ಪಂದ್ಯದ ಫಲಿತಾಂಶ ಪ್ಲೇಆಫ್ ಸುತ್ತಿನ ಪಂದ್ಯಗಳ ನಿರ್ಧಾರ ಮಾಡುತ್ತಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಆರ್‌ಸಿಬಿ ಉತ್ತನ ನೆಟ್ ರನ್‌ರೇಟ್ ಹೊಂದಿದ್ದ ಕಾರಣ 166 ರನ್ ಕ್ರಾಸ್ ಮಾಡಿದ್ರೆ ಟಾಪ್ 2 ಸ್ಥಾನ ಸಿಗುವುದು ಪಕ್ಕಾ ಆಗಿತ್ತು. 200 ರನ್ ಬಾರಿಸಿದ ಕಾರಣ ಟಾಪ್ 1 ಸ್ಥಾನ ಪಕ್ಕಾ ಆಯಿತು ಹಾಗೂ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಹೀಗಾಗಿ ಟಾಸ್ 2 ಸ್ಥಾನಗಳನ್ನು ಪಡೆದ ಆರ್‌ಸಿಬಿ ಹಾಗೂ ಗುಜರಾತ್ ಟೈಟನ್ಸ್ ಕ್ವಾಲಿಫಯರ್ 1ಕ್ಕೆ ಆಯ್ಕೆಗೊಂಡವು.
ಹೀಗೆ ಈ ಪಂದ್ಯದಲ್ಲಿ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫಯರ್ ಒಂದಕ್ಕೆ ಆಯ್ಕೆಯಾಗಿದ್ದು, ಪಂದ್ಯದ ವೇಳೆ ವಿರಾಟ್ ಕೊಹ್ಲಿ ಎದುರಾಳಿ ತಂಡದ ಟ್ರಾವಿಸ್ ಹೆಡ್‌ರನ್ನು ಕೆಣಕಿ ಮುಖಭಂಗಕ್ಕೊಳಗಾಗಿದ್ದಾರೆ.
2023ರ ವಿಶ್ವಕಪ್ ಫೈನಲ್‌ನಲ್ಲೇ ಜೀವನ ಪೂರ್ತಿ ಮರೆಯಲಾಗದಂತಹ ಕಹಿ ನೆನಪು ಕೊಟ್ಟಿರುವ ಟ್ರಾವಿಸ್ ಹೆಡ್‌ರನ್ನು ಕೆಣಕಿದ ಕೊಹ್ಲಿ ಬೌಲಿಂಗ್ ಮಾಡು ಎಂದು ಚುಡಾಯಿಸಿದ್ದಾರೆ. ಓರ್ವ ಬ್ಯಾಟ್ಸ್‌ಮನ್‌ನನ್ನು ಬೌಲಿಂಗ್ ಮಾಡು ಎಂದು ಕಿಚಾಯಿಸುವುದು ಎಷ್ಟು ಸರಿ? ಇದೇ ಕೊಹ್ಲಿ ಬೌಲಿಂಗ್ ಮಾಡಿದಾಗ ಆಲ್ಬಿ ಮಾರ್ಕೆಲ್ ಕೊಟ್ಟ ರೀತಿಯ ಉತ್ತರವೇ ಅಲ್ಲವೇ ಬಹುತೇಕ ಎಲ್ಲ ಬ್ಯಾಟ್ಸ್‌ಮನ್‌ಗಳಿಗೂ ಸಿಗುವುದು.
ಹೌದು, ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಹೆಡ್‌ಗೆ ಬೌಲಿಂಗ್ ಮಾಡುವಂತೆ ಕೊಹ್ಲಿ ಆಹ್ವಾನಿಸಿ ಕಾಲೆಳೆದರು. ಆದರೆ ನಾಯಕ ಪ್ಯಾಟ್ ಕಮಿನ್ಸ್ ಇದನ್ನು ಬಿಟ್ಟುಬಿಡ್ತಾರಾ? ಆರ್‌ಸಿಬಿ ನಾಯಕ, ಸ್ಪಿನ್ ಸ್ಪೆಷಲಿಸ್ಟ್ ರಜತ್ ಪಟಿದಾರ್ ಆಡುವಾಗಲೇ ಹೆಡ್‌ಗೆ ಬಾಲ್ ಕೊಟ್ಟರು. ಪರಿಣಾಮ ಅರ್ಧಶತಕ ಬಾರಿಸಿದ್ದ ಪಟಿದಾರ್ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್ ನೀಡಿ ಔಟ್ ಆದರು. ಈ ಮೂಲಕ ಕೊಹ್ಲಿ ಆಸೆಯಂತೆ ಕಮಿನ್ಸ್ ಹೆಡ್‌ಗೆ ಬಾಲ್ ನೀಡಿ ವಿಕೆಟ್ ತೆಗೆಸಿ ಅವಮಾನಿಸಿಬಿಟ್ಟರು.

