HomeIPL 2026ಪಿಚ್ ಕ್ಯಾಚ್ ಪಡೆದು ಮೋಸ ಮಾಡಲು ನೋಡಿದ ಗಿಲ್, ಅಂಪೈರ್ ಕೂಡ ಬೆಂಬಲ; ಮೈದಾನದಿಂದ ಹೋಗದೇ...

ಪಿಚ್ ಕ್ಯಾಚ್ ಪಡೆದು ಮೋಸ ಮಾಡಲು ನೋಡಿದ ಗಿಲ್, ಅಂಪೈರ್ ಕೂಡ ಬೆಂಬಲ; ಮೈದಾನದಿಂದ ಹೋಗದೇ ಅಂಪೈರ್‌ಗೆ ಚಾಲೆಂಜ್ ಮಾಡಿ ಗೆದ್ದ ಕೊಹ್ಲಿ!

ನಿನ್ನೆ ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ಇನ್ನು ಪಂದ್ಯದ ಕೊನೆಯವರೆಗೂ ಕಣದಲ್ಲಿದ್ದು 42 ಎಸೆತಗಳಲ್ಲಿ ಅಜೇಯ 75 ರನ್ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು. ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಪಂದ್ಯ ಮುಗಿಸಿದ ವಿರಾಟ್ ಕೊಹ್ಲಿ 63 ರನ್ ಗಳಿಸಿದ್ದಾಗ ಅರ್ಷದ್ ಖಾನ್ ಎಸೆದ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಲು ಯತ್ನಿಸಿದ್ದರು. ಆದರೆ ಗಿಲ್ ಕ್ಯಾಚ್ ಪಡೆದು ಸಂಭ್ರಮಿಸಿದ್ದರು. ಅಂಪೈರ್ ಸಹ ಅದನ್ನು ಔಟ್ ಎಂದು ನಿರ್ಣಯ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಕೊಹ್ಲಿ ಇದನ್ನು ಒಪ್ಪಲು ತಯಾರಿರಲಿಲ್ಲ. ಕೂಡಲೇ ಅಂಪೈರ್ ಜತೆ ಇದು ಔಟ್ ಇಲ್ಲ, ಬೇಕಿದ್ದರೆ ಪರಿಶೀಲಿಸಿ ನೆಲಕ್ಕೆ ಚೆಂಡು ತಾಗಿದೆ ಎಂದು ವಾದಿಸಲು ಆರಂಭಿಸಿದರು. ಅಲ್ಲದೇ ಗಿಲ್ ಜತೆ ಕೂಡ ಅದು ನಾಟ್‌ಔಟ್ ಚೆಂಡನ್ನು ನೆಲಕ್ಕೆ ತಾಗಿಸಿದ್ದೀಯ ಎಂದರು. ಕೊಹ್ಲಿಯ ವಾದ ಕೇಳಿ ಅಂಪೈರ್ ಅದು ಔಟ್ ಎಂದು ಹೇಳಿ ಕಳುಹಿಸಿದರು.

ಆದರೆ ಕೊಹ್ಲಿಯ ವಾದ ಕೇಳಿ ನಿಯಮದ ಪ್ರಕಾರ ಮತ್ತೊಮ್ಮೆ ಕ್ಯಾಚ್ ಸರಿ ಇದೆಯೇ ಇಲ್ಲವೇ ಎಂದು ಪರಿಶೀಲಿಸಲಾಯಿತು. ಈ ಸಮಯದಲ್ಲಿ ಗಿಲ್ ಕ್ಯಾಚ್ ಪಡೆಯುವಾಗ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಯಿತು. ಥರ್ಡ್ ಅಂಪೈರ್ ನಾಟ್‌ಔಟ್ ಎಂದು ನಿರ್ಣಯ ಪ್ರಕಟಿಸಿದರು. ಹೀಗೆ ಅದು ಪಿಚ್ ಕ್ಯಾಚ್ ಎಂದು ಪ್ರಕಟವಾಗುತ್ತಿದ್ದಂತೆಯೇ ಕೊಹ್ಲಿ ನಾನು ಮೊದಲೇ ಹೇಳಲಿಲ್ವ ಎಂದು ಹೇಳಿದರು.

ಅಲ್ಲದೇ ಗಿಲ್ ಬಳಿ ತೆರಳಿ ನೋಡು ಅಲ್ಲಿ ಅದು ನಾಟ್‌ಔಟ್ ಎಂದರು. ಆ ವಿಡಿಯೊ ನೋಡಿ ಗಿಲ್ ಆಶ್ಚರ್ಯಕ್ಕೆ ಒಳಗಾದರು. ಇನ್ನು ನೆಟ್ಟಿಗರು ಆ ಕ್ಯಾಚ್ ಪಡೆದ ಯಾವುದೇ ಬೌಲರ್‌ಗಾದರೂ ಚೆಂಡು ನೆಲಕ್ಕೆ ತಾಗಿದ್ದರ ಅನುಭವವಾಗುತ್ತದೆ. ಗಿಲ್ ಪಿಚ್ ಕ್ಯಾಚ್ ಪಡೆದು ನಾಟಕವಾಡಿದರು ಎಂದು ಟೀಕಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular