HomeLatest NewsIPL 2026: ಹೈದರಾಬಾದ್ ವಿರುದ್ಧ ವೈಭವ್ ಅಬ್ಬರದ ಶತಕ; ಬೌಂಡಿರಗಳಲ್ಲೇ ಹರಿದುಬಂತು 92 ರನ್!

IPL 2026: ಹೈದರಾಬಾದ್ ವಿರುದ್ಧ ವೈಭವ್ ಅಬ್ಬರದ ಶತಕ; ಬೌಂಡಿರಗಳಲ್ಲೇ ಹರಿದುಬಂತು 92 ರನ್!

ಐಪಿಎಲ್ 2026ರ ಲೀಗ್ ಹಂತದ 36ನೇ ಪಂದ್ಯ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ ಬರೋಬ್ಬರಿ 12 ಸಿಕ್ಸರ್ ಸಹಿತ 103 ರನ್ ಚಚ್ಚಿದರು. ಈ ಮೂಲಕ ಬೌಂಡರಿಗಳಲ್ಲೇ 92 ರನ್‌ಗಳನ್ನು ವೈಭವ್ ಸೂರ್ಯವಂಶಿ ಬಾರಿಸಿದರು.

ಈ ಮೂಲಕ ಐಪಿಎಲ್‌ನಲ್ಲಿ ತನ್ನ ಎರಡನೇ ಶತಕ ಬಾರಿಸಿದ ವೈಭವ್ ಸೂರ್ಯವಂಶಿ ಭಾರತದ ಪರ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದರು. 36 ಎಸೆತದಲ್ಲಿ ಈ ಶತಕ ಬಾರಿಸಿ ಎರಡನೇ ಸ್ಥಾನ ಅಲಂಕರಿಸಿರುವ ವೈಭವ್ ಕಳೆದ ವರ್ಷ ಗುಜರಾತ್ ಟೈಟನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್ ಈ ಪಟ್ಟಿಯಲ್ಲಿ ತಾವೇ ಅಗ್ರಸ್ಥಾನದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular