HomeIPL 2026IPL 2026: ಅಂಪೈರ್ ತೀರ್ಮಾನದಿಂದ ಚೆನ್ನೈ ವಿರುದ್ಧ ಸೋಲು; ಪೆವಿಲಿಯನ್‌ ತಲುಪುತ್ತಿದ್ದಂತೆ ಹೆಲ್ಮೆಟ್ ಬಿಸಾಡಿ ಕೋಪ...

IPL 2026: ಅಂಪೈರ್ ತೀರ್ಮಾನದಿಂದ ಚೆನ್ನೈ ವಿರುದ್ಧ ಸೋಲು; ಪೆವಿಲಿಯನ್‌ ತಲುಪುತ್ತಿದ್ದಂತೆ ಹೆಲ್ಮೆಟ್ ಬಿಸಾಡಿ ಕೋಪ ಹೊರಹಾಕಿದ ಸ್ಟಬ್ಸ್ | ವಿಡಿಯೊ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ( ಏಪ್ರಿಲ್ 11 ) ನಡೆದ ಐಪಿಎಲ್ 2026ರ ಲೀಗ್ ಹಂತದ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಚೆನ್ನೂ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕ ಹಾಗೂ ಆಯುಷ್ ಮ್ಹಾತ್ರೆ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 213 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲ್ಔಟ್ ಆಯಿತು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭದಲ್ಲಿ ಪಥುಮ್ ನಿಸ್ಸಂಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ ಬಿಟ್ಟರೆ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ಟ್ರಿಸ್ಟಬ್ ಸ್ಟಬ್ಸ್ ಡೆಲ್ಲಿ ಪಾಲಿಗೆ ಉಳಿದಿದ್ದ ಕೊನೆಯ ಗೆಲುವಿನ ನಂಬಿಕೆಯಾಗಿದ್ದರು. ಆದರೆ ಸ್ಟಬ್ಸ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಬಾರಿಸಿ ಕ್ಯಾಚ್ ನೀಡಿ ಔಟ್ ಆದರು. ಅಲ್ಲಿಗೆ ಡೆಲ್ಲಿ ಗೆಲುವಿನ ಆಸೆ ಕಮರಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಯ ಹಂತದಲ್ಲಿ ತಂಡಕ್ಕೆ ಆಸರೆಯಾಗಿದ್ದ ಕೊನೆಯ ಬ್ಯಾಟ್ಸ್‌ಮನ್ ಸ್ಟಬ್ಸ್ ವಿಕೆಟ್ ಒಪ್ಪಿಸುತ್ತಿದ್ದಂತೆ ಡೆಲ್ಲಿ ಪಾಳಯದಲ್ಲಿ ಬೇಸರ ಮನೆ ಮಾಡಿತು. ಅಲ್ಲದೇ ಸ್ಟಬ್ಸ್ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ ತೀವ್ರವಾಗಿ ಬೆವರಿದ್ದ ಕಾರಣ ಗ್ಲೌಸ್ ಬದಲಾಯಿಸಲು ಅನುಮತಿ ನೀಡುವಂತೆ ಅಂಪೈರ್ ಬಳಿ ಮನವಿ ಮಾಡಿಕೊಂಡರು. ಆದರೆ ಅಂಪೈರ್‌ಗಳು ಇದಕ್ಕೆ ನಿರಾಕರಿಸಿದರು.

ಅಂಪೈರ್‌ಗಳು ಗ್ಲೌಸ್ ಬದಲಿಸಲು ನಿರಾಕರಿಸಿದ ಬೆನ್ನಲ್ಲೇ ಸ್ಟಬ್ಸ್ ಕ್ಯಾಚ್ ನೀಡಿ ಔಟ್ ಆದರು. ಅಂಪೈರ್ ಗ್ಲೌಸ್ ಬದಲಿಸಲು ಅವಕಾಶ ನೀಡಿದ್ದರೆ ಸ್ಟಬ್ಸ್ ವಿಕೆಟ್ ಬೀಳುತ್ತಿರಲಿಲ್ಲ ಎಂದು ಆರೋಪಿಸಿ ಡೆಲ್ಲಿ ತಂಡದ ಆಟಗಾರರು ಮಾತಿನ ಚಕಮಕಿಯನ್ನೂ ಸಹ ನಡೆಸಿದರು.

ಇತ್ತ ಏಕಾಂಗಿ ಹೋರಾಟ ನಡೆಸಿ ಗೆಲುವು ತಂದುಕೊಡಬೇಕೆಂಬ ಗುರಿಯನ್ನು ಹೊಂದಿದ್ದ ಸ್ಟಬ್ಸ್ ಔಟ್ ಆಗಿ ಡ್ರೆಸಿಂಗ್ ರೂಮ್ ತಲುಪುತ್ತಿದ್ದಂತೆಯೇ ಹೆಲ್ಮೆಟನ್ನು ನೆಲಕ್ಕೆ ಬಡಿದು ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಬ್ಯಾಟ್ಸ್‌ಮನ್‌ಗೆ ಗ್ಲೌಸ್ ಬದಲಿಸಲು ನಿಯಮಗಳಿದ್ದು, ಓವರ್ ಬಳಿಕ ಅಥವಾ ಟೈಮ್‌ಔಟ್‌ನಲ್ಲಿ ಬದಲಿಸಬಹುದಾಗಿದೆ. ಒಂದುವೇಳೆ ಗ್ಲೌಸ್‌ ಹರಿದುಹೋದರೆ ಮಾತ್ರ ಓವರ್ ಮಧ್ಯ ಬದಲಿಸಲು ಅವಕಾಶವಿರುತ್ತದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular