HomeIPL 2026ತಿಂಗಳ ಹಿಂದೆ ಸೋಲಿಲ್ಲದೇ 13 ಅಂಕ ಹೊಂದಿದ್ದ ತಂಡ ಒಂದೆಡೆ, ಒಂದೂ ಗೆಲುವಿಲ್ಲದೇ ಕಂಗಾಲಾಗಿದ್ದ ತಂಡ...

ತಿಂಗಳ ಹಿಂದೆ ಸೋಲಿಲ್ಲದೇ 13 ಅಂಕ ಹೊಂದಿದ್ದ ತಂಡ ಒಂದೆಡೆ, ಒಂದೂ ಗೆಲುವಿಲ್ಲದೇ ಕಂಗಾಲಾಗಿದ್ದ ತಂಡ ಒಂದೆಡೆ: ಇಂದು ಎರಡೂ ತಂಡಗಳೂ ಸೇಮ್ ಪಾಯಿಂಟ್; ಹೇಗಿದೆ ನೋಡಿ ಕರ್ಮ!

ನಿನ್ನೆ ( ಮೇ 20 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್‌ನ ಲೀಗ್ ಹಂತದ 65ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ತನ್ನ ಆರನೇ ಗೆಲುವನ್ನು ಕಂಡಿತು ಹಾಗೂ ಈ ಮೂಲಕ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 148 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್‌ ಕಲೆಹಾಕಿತು.

ಇನ್ನು ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಪಂಜಾಬ್ ವಿರುದ್ಧದ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಬಳಿಕ ನಡೆದ ಮೂರು ಪಂದ್ಯಗಳನ್ನು ಸೋತಿತು. ಹೀಗೆ ಮೊದಲ ಆರು ಪಂದ್ಯಗಳಲ್ಲಿ ಯಾವುದೇ ಗೆಲುವು ಕಾಣದೇ ಇದ್ದ ಕೊಲ್ಕತ್ತಾ ರದ್ದಾದ ಪಂದ್ಯದ ಒಂದು ಅಂಕವನ್ನು ಮಾತ್ರ ಹೊಂದಿ ಅಂಕಪಟ್ಟಿಯಲ್ಲಿ ಏಪ್ರಿಲ್ 21ರಂದು ಕೊನೆಯ ಸ್ಥಾನದಲ್ಲಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇ ದಿನ ಪಂಜಾಬ್ ಕಿಂಗ್ಸ್ 13 ಅಂಕಗಳ ಜತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆ ಒಂದು ಅಂಕ ಇದೇ ಕೊಲ್ಕತ್ತಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಬಂದಿದ್ದ ಅಂಕ.

ಹೀಗೆ ಆ ದಿನ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಇಂದು ಅಷ್ಟೇ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಅಂದು ಗೆಲುವನ್ನೇ ಕಾಣದೇ ಇದ್ದ ಕೊಲ್ಕತ್ತಾ ಸಹ ಇಂದು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಇನ್ನು ಟೂರ್ನಿಯಲ್ಲಿ ಎರಡೂ ತಂಡಗಳು ತಮ್ಮ ಮೂರನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾಗ ಮಳೆ ಆಗಮನವಾಗಿತ್ತು. ಆ ಸಮಯದಲ್ಲಿ ಪಂಜಾಬ್ ಬಲಿಷ್ಠವಾಗಿ ತೋರುತ್ತಿದ್ದ ಕಾರಣ ಪಂದ್ಯ ರದ್ದಾದದ್ದು ಕೆಕೆಆರ್‌ಗೆ ಬಿಟ್ಟಿ ಒಂದು ಅಂಕ ದೊರೆತಂತಾಗಿದೆ ಎಂದು ಟ್ರೋಲ್‌ಗಳು ಹರಿದುಬಂದವು. ಅಲ್ಲದೇ ಶ್ರೇಯಸ್ ಐಯ್ಯರ್ ಸೋದರಿ ಶ್ರೇಷ್ಠ ಐಯ್ಯರ್ ಒಂದು ಅಂಕ ಉಚಿತವಾಗಿ ಪಡೆದು ಮಜಾ ಮಾಡಿ ಎಂದು ಕೆಕೆಆರ್ ಕಾಲೆಳೆದಿದ್ದರು.

ಆದರೆ ಕರ್ಮ ಹೇಗಿದೆ ಎಂದರೆ ಇಂದು ಪಂಜಾಬ್ ಹಾಗೂ ಕೆಕೆಆರ್ ಎರಡೂ ತಂಡಗಳು ಸಮನಾದ ಸ್ಥಾನದಲ್ಲಿವೆ. ಎರಡೂ ತಂಡಗಳಿಗೂ ಇನ್ನೊಂದು ಪಂದ್ಯ ಬಾಕಿ ಇದ್ದು ಆ ಪಂದ್ಯದಲ್ಲಿ ಗೆದ್ದರೆ ಎರಡೂ ತಂಡಗಳ ಅಂಕ 15 ಆಗಲಿದೆ. ಸದ್ಯ 14 ಅಂಕ ಹೊಂದಿರುವ ರಾಜಸ್ಥಾನ್ ಏನಾದರೂ ಸೋತು, ಪಂಜಾಬ್ ಸಹ ಸೋತರೆ ಕೆಕೆಆರ್ ಪ್ಲೇಆಫ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular