HomeIPL 2026IPL 2026: ಪಂದ್ಯ ವೀಕ್ಷಣೆ ವೇಳೆ ಶೂ ತೋರಿಸಿದ ಲಕ್ನೋ ಅಭಿಮಾನಿಗೆ ಚಪ್ಪಲಿ ಎಸೆದ ಪಂಜಾಬ್...

IPL 2026: ಪಂದ್ಯ ವೀಕ್ಷಣೆ ವೇಳೆ ಶೂ ತೋರಿಸಿದ ಲಕ್ನೋ ಅಭಿಮಾನಿಗೆ ಚಪ್ಪಲಿ ಎಸೆದ ಪಂಜಾಬ್ ಅಭಿಮಾನಿ; ವಿಡಿಯೊ

ನಿನ್ನೆ ( ಏಪ್ರಿಲ್ 19 ) ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 29ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 54 ರನ್‌ಗಳ ಭರ್ಜರಿ ಗೆಲುವನ್ನು ಕಂಡಿತು.

ಈ ಮೂಲಕ ಐದನೇ ಗೆಲುವನ್ನು ಕಂಡ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನೂ ಕಾಣದೇ ಅಂಕಪಟ್ಟಿಯಲ್ಲಿ 11 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್‌ಗಳಿಗೆ ಸಿಕ್ಸರ್‌ಗಳ ಮೂಲಕ ಮೈದಾನದ ಎಲ್ಲ ದಿಕ್ಕನ್ನೂ ಪರಿಚಯಿಸಿದ ಪಂಜಾಬ್ ಕಿಂಗ್ಸ್ 254 ರನ್ ಕಲೆಹಾಕಿತು. ಆದರೆ ಲಕ್ನೋ ಸೂಪರ್ ಜೈಂಟ್ಸ್ ಈ ಮೊತ್ತವನ್ನು ಬೆನ್ನಟ್ಟಲಾಗದೇ 200 ರನ್ ಮಾತ್ರ ಗಳಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಪಂಜಾಬ್ ಕಿಂಗ್ಸ್ ಭರ್ಜರಿ ಮನರಂಜನೆಯನ್ನೇ ನೀಡಿತು. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಯೋರ್ವ ಪಂಜಾಬ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬನ ಜತೆ ಜಗಳಕ್ಕೆ ಇಳಿದಿದ್ದಾನೆ.

ಇತ್ತೀಚೆಗೆ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳ ನಡುವೆ ಪೈಪೋಟಿಯ ಸಂಭ್ರಮಾಚರಣೆ ಹಾಗೂ ಫ್ಯಾನ್ ವಾರ್ ಸಾಮಾನ್ಯ. ಆದರೆ ನಿನ್ನೆಯ ಘಟನೆ ತುಸು ಅತಿರೇಕಕ್ಕೆ ತಿರುಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಭಿಮಾನಿ ಪಂಜಾಬ್ ಅಭಿಮಾನಿಗೆ ತನ್ನ ಶೂ ತೋರಿಸಿ ಅವಾಜ್ ಹಾಕಿದ್ದಾನೆ.

ಇದರಿಂದ ಕುಪಿತಗೊಂಡ ಪಂಜಾಬ್ ಕಿಂಗ್ಸ್ ತಂಡದ ಅಭಿಮಾನಿ ತನ್ನ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದಾನೆ. ಈ ವೇಳೆ ಪರಿಸ್ಥಿತಿ ಇನ್ನೂ ಕೈ ಮೀರುವ ಮುನ್ನ ಅಕ್ಕ ಪಕ್ಕ ಇದ್ದ ಎರಡೂ ತಂಡದ ಅಭಿಮಾನಿಗಳು ಜಗಳ ತಡೆದಿದ್ದಾರೆ.

ಎಕ್ಸ್ ಪೋಸ್ಟ್‌ ಪ್ರಕಾರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಭಿಮಾನಿ ಪಂಜಾಬಿ ಸಮುದಾಯದ ಕುರಿತು ಕಾಮೆಂಟ್ ಮಾಡಿ ಶೂ ತೋರಿಸಿದ್ದಾನೆ ಎನ್ನಲಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular