HomeLatest NewsIPL 2026: 11 ಓವರ್ ಪಂದ್ಯದಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್

IPL 2026: 11 ಓವರ್ ಪಂದ್ಯದಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್

ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಐಪಿಎಲ್ 2026ರ 13ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 27 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡ ಕಾರಣ 11 ಓವರ್‌ಗಳ ಆಟ ಆಯೋಜನೆಯಾಗಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಹಾಗೂ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ 151 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.

ಆದರೆ ರಾಜಸ್ಥಾನ್ ರಾಯಲ್ಸ್ ಭೀಕರ ಬೌಲಿಂಗ್ ದಾಳಿಗೆ ಆರಂಭದಿಂದಲೇ ನಲುಗಿದ ಮುಂಬೈ ಇಂಡಿಯನ್ಸ್ 11 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಕಲೆಹಾಕಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ 30 ಎಸೆತಗಳಲ್ಲಿ 80 ರನ್ ಚಚ್ಚಿ ಅಬ್ಬರದ ಆರಂಭ ನೀಡಿದರು. ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 39 ರನ್ ಚಚ್ಚಿದರೆ, ಜೈಸ್ವಾಲ್ ಅಂತಿಮ ಹಂತದವರೆಗೂ ಕಣದಲ್ಲಿದ್ದು, 32 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 77 ರನ್ ಬಾರಿಸಿದರು. ಇನ್ನುಳಿದಂತೆ ಧ್ರುವ್ ಜುರೆಲ್ 2, ನಾಯಕ ರಿಯಾನ್ ಪರಾಗ್ 20 (10), ಶಿಮ್ರಾನ್ ಹೆಟ್ಮಾಯೆರ್ 7 ಎಸೆತಗಳಲ್ಲಿ ಅಜೇಯ 6 ರನ್ ಕಲೆಹಾಕಿದರು.

ಮುಂಬೈ ಇಂಡಿಯನ್ಸ್ ಪರ ಎಎಂ ಘನಜ್ಫರ್ ಎರಡು ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ರಾಜಸ್ಥಾನ್ ರಾಯಲ್ಸ್ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಮುಂಬೈ ಇಂಡಿಯನ್ಸ್ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಹಿನ್ನಡೆಗೊಳಗಾಗಿ ಕೇವಲ 22 ರನ್‌ಗೆ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ರಿಯಾನ್ ರಿಕಲ್ಟೆನ್ 8 ರನ್‌ಗೆ ವಿಕೆಟ್ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 6 ರನ್ ಹಾಗೂ ರೋಹಿತ್ ಶರ್ಮಾ ಕೇವಲ 5 ರನ್ ಗಳಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ 14, ನಾಯಕ ಹಾರ್ದಿಕ್ ಪಾಂಡ್ಯ 9, ನಮನ್ ಧೀರ್ 25 (13), ಶೆರ್ಫೇನ್ ರುದರ್‌ಫೋರ್ಡ್ 25 (8), ಶಾರ್ದೂಲ್ ಠಾಕೂರ್ 8, ಟ್ರೆಂಟ್ ಬೌಲ್ಟ್ 1, ಜಸ್‌ಪ್ರೀತ್ ಬುಮ್ರಾ ಅಜೇಯ 5 ರನ್ ಹಾಗೂ ದೀಪಕ್ ಚಹರ್ ಅಜೇಯ 6 ರನ್ ಕಲೆಹಾಕಿದರು.

ರಾಜಸ್ಥಾನ್ ರಾಯಲ್ಸ್ ಪರ ಸಂದೀಪ್ ಶರ್ಮಾ, ರವಿ ಬಿಷ್ಣೋಯಿ ಹಾಗೂ ನಾಂಡ್ರೆ ಬರ್ಗರ್ ತಲಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಹಾಗೂ ತುಷಾರ್ ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular