19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ 67ನೇ ಪಂದ್ಯ ಇಂದು ( ಮೇ 22 ) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಿಸಿಕೊಂಡಿದೆ. ತಂಡದ ಪರ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಕಣಕ್ಕಿಳಿದರು.
ಮೊದಲ ಓವರ್ನಿಂದಲೇ ಉತ್ತಮ ಆರಂಭ ಮಾಡಿದ ಈ ಜೋಡಿ 4 ಓವರ್ಗಳಲ್ಲಿ 45 ರನ್ ಬಾರಿಸಿ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಳ್ಳುವ ಮೂಲಕ ಜತೆಯಾಟವನ್ನು ಅಂತ್ಯಗೊಳಿಸಿತು.
ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಮೊದಲ ಮೂರು ಓವರ್ಗೆ 33 ರನ್ ಗಳಿಸಿತ್ತು. ನಾಲ್ಕನೇ ಓವರ್ ಬೌಲಿಂಗ್ ಮಾಡಲು ರಸಿಕ್ ಧರ್ ಸಲಾಮ್ ಕೈಗೆ ನಾಯಕ ಚೆಂಡನ್ನು ಕೊಟ್ಟರು.
ಈ ಓವರ್ನ ಮೊದಲನೇ, ಎರಡನೇ ಹಾಗೂ ನಾಲ್ಕನೇ ಓವರ್ಗೆ ಬೌಂಡರಿ ಬಾರಿಸಿ ಕಾಡಿದ ಟ್ರಾವಿಸ್ ಹೆಡ್ಗೆ ಓವರ್ನ ಕೊನೆಯ ಎಸೆತವನ್ನು ಯಾರ್ಕರ್ ಎಸೆದ ರಸಿಕ್ ಕ್ಲೀನ್ ಬೌಲ್ಡ್ ಮಾಡಿದರು. ವಿಕೆಟ್ ಪಡೆದ ಖುಷಿಯಲ್ಲಿ ಅಲ್ಲಿಯವರೆಗೂ ಬೌಂಡರಿಗಳಿಗೆ ಕಿರುಚುತ್ತಿದ್ದ ಹೈದರಾಬಾದ್ ಅಭಿಮಾನಿಗಳತ್ತ ತಿರುಗಿ ಕಿವಿಗೆ ಕೈ ಇಟ್ಟುಕೊಂಡು ಎಲ್ಲಿ ಸೌಂಡ್ ಕೇಳಿಸುತ್ತಿಲ್ಲ ಎಂದು ವಿಶೇಷವಾಗಿ ಸಂಭ್ರಮಾಚರಣೆ ಮಾಡಿದರು.

