HomeIPL 2026ಆತನಿಗೆ ಯಾವ ಬೌಲರ್ ಬಳಸಲಿ ಎಂದು ಗೊಂದಲಕ್ಕೀಡಾಗಿಬಿಟ್ಟೆ, ಅಷ್ಟರ ಮಟ್ಟಿಗೆ ಬಾರಿಸಿಬಿಟ್ಟ; ಲಕ್ನೋ ವಿರುದ್ಧದ ಸೋಲಿಗೆ...

ಆತನಿಗೆ ಯಾವ ಬೌಲರ್ ಬಳಸಲಿ ಎಂದು ಗೊಂದಲಕ್ಕೀಡಾಗಿಬಿಟ್ಟೆ, ಅಷ್ಟರ ಮಟ್ಟಿಗೆ ಬಾರಿಸಿಬಿಟ್ಟ; ಲಕ್ನೋ ವಿರುದ್ಧದ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಪಟಿದಾರ್

ನಿನ್ನೆ ( ಮೇ 7 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 9 ರನ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮಳೆಯಿಂದಾಗಿ ಎರಡು ಬಾರಿ ನಿಂತು ನಡೆದ ಪಂದ್ಯದಲ್ಲಿ ಒಂದು ಓವರ್ ಕಡಿತಗೊಂಡು 19 ಓವರ್‌ಗಳ ಪಂದ್ಯ ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 111 ರನ್ ಚಚ್ಚಿದ ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ‘ಲಕ್ನೋ ನೀಡಿದ್ದ ಗುರಿ ಬೆನ್ನಟ್ಟುವುದರ ಬಗ್ಗೆ ನಮಗೆ ವಿಶ್ವಾಸವಿತ್ತು. ನಮ್ಮ ಆಟಗಾರರು ಚೆನ್ನಾಗಿ ಆಡಿದರು. ಒಂದೆರಡು ದೊಡ್ಡ ಹೊಡೆತಗಳನ್ನು ಬಾರಿಸಿದ್ದರೆ ಗೆಲ್ಲುತ್ತಿದ್ದೆವು ಎನ್ನುವ ಹಂತಕ್ಕೆ ಪಂದ್ಯವನ್ನು ತಂದೆವು. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿತ್ತು. ಇದು ಒಂದೊಳ್ಳೆ ಬ್ಯಾಟಿಂಗ್ ಪಿಚ್. ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು, ಈ ಸೋಲಿನ ಬಗ್ಗೆ ಅವಲೋಕಿಸಲು ಇನ್ನೂ ಸಮಯ ಬೇಕಿದೆ. ಮಿಚೆಲ್ ಮಾರ್ಷ್ ಚೆನ್ನಾಗಿ ಆಡಿದರು. ಅದರಲ್ಲೂ ಮುಖ್ಯವಾಗಿ ಪವರ್‌ಪ್ಲೇನಲ್ಲಿ ನಮ್ಮನ್ನು ಒತ್ತಡಕ್ಕೆ ತಳ್ಳಿದರು. ಪವರ್‌ಪ್ಲೇ ಮುಗಿದ ಬಳಿಕ ಈತನಿಗೆ ಯಾವ ಬೌಲರ್ ಬಳಸಲಿ ಎಂದು ಗೊಂದಕ್ಕೀಡಾಗಿಬಿಟ್ಟೆ. ಆತನ ಇನ್ನಿಂಗ್ಸ್ ಅದ್ಭುತವಾಗಿತ್ತು. ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳೂ ಚೆನ್ನಾಗಿ ಸ್ಪಂದಿಸಿದರು. ಎಲ್ಲರೂ ವಿಶ್ವಾಸದಿಂದ ಆಡಿದ್ದಾರೆ’ ಎಂದು ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular