HomeIPL 2026ಆರ್‌ಸಿಬಿಯನ್ನು 2ನೇ ಬಾರಿಗೆ ಚಾಂಪಿಯನ್ ಮಾಡಿ ಮಹಾನ್ ನಾಯಕರಾದ ಧೋನಿ, ರೋಹಿತ್ ಶರ್ಮಾ ಪಟ್ಟಿ ಸೇರಿ...

ಆರ್‌ಸಿಬಿಯನ್ನು 2ನೇ ಬಾರಿಗೆ ಚಾಂಪಿಯನ್ ಮಾಡಿ ಮಹಾನ್ ನಾಯಕರಾದ ಧೋನಿ, ರೋಹಿತ್ ಶರ್ಮಾ ಪಟ್ಟಿ ಸೇರಿ ದಾಖಲೆ ಬರೆದ ರಜತ್ ಪಟಿದಾರ್!

ನಿನ್ನೆ ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ಈ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದ್ದು, ಟ್ರೋಫಿ ಇಲ್ಲದೇ 17 ವರ್ಷ ಎದುರಿಸಿದ್ದ ಟ್ರೋಲ್‌ಗಳಿಗೆ ಈ ಬಾರಿಯೂ ತಿರುಗೇಟು ಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಅಷ್ಟು ವರ್ಷಗಳ ಕಾಲ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡು ವರ್ಷ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವೆಂದರೆ ಅದಕ್ಕೆ ಕಾರಣ ರಜತ್ ಪಟಿದಾರ್. ತನ್ನ ಚಾಣಾಕ್ಷ ನಾಯಕತ್ವದಿಂದ ಟ್ರೋಫಿಯೇ ಇಲ್ಲದ ಆರ್‌ಸಿಬಿಯನ್ನು ಎರಡು ಬಾರಿ ಚಾಂಪಿಯನ್ ಮಾಡಿದ ರಜತ್ ಪಟಿದಾರ್ ಈ ಮೂಲಕ ಧೋನಿ ಹಾಗೂ ರೋಹಿತ್ ಶರ್ಮಾ ಸಾಲಿಗೆ ಸೇರಿಕೊಂಡಿದ್ದು, ಸತತ ಎರಡು ಟ್ರೋಫಿ ಗೆಲ್ಲಿಸಿದ ಮೂರನೇ ನಾಯಕ ಎನಿಸಿಕೊಂಡಿದ್ದಾರೆ.

ಹೌದು, 2010 ಹಾಗೂ 2011ರಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸತತವಾಗಿ ಟ್ರೋಫಿ ಗೆಲ್ಲಿಸಿ ಸತತ ಎರಡು ಕಪ್ ಗೆದ್ದ ಮೊದಲ ಐಪಿಎಲ್ ನಾಯಕ ಎಂಬ ದಾಖಲೆ ಬರೆದಿದ್ದರು. ಬಳಿಕ ರೋಹಿತ್ ಶರ್ಮಾ 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಮಾಡಿ ಸತತ ಎರಡು ಕಪ್ ಗೆಲ್ಲಿಸಿದ ಎರಡನೇ ನಾಯಕ ಎನಿಸಿಕೊಂಡಿದ್ದರು.

ಇದೀಗ ರಜತ್ ಪಟಿದಾರ್ ಕಳೆದ ವರ್ಷ ಹಾಗೂ ಈ ವರ್ಷ ಟ್ರೋಫಿಯನ್ನು ಗೆದ್ದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular