HomeIPL 2026IPL 2026: ತವರಿನಲ್ಲೇ ಮುಂಬೈ ಬೇಟೆಯಾಡಿದ ಹೈದರಾಬಾದ್ ಕಂಡು ಗಳಗಳನೆ ಕಣ್ಣೀರಿಟ್ಟ ನೀತಾ ಅಂಬಾನಿ; ಭಯದಿಂದ...

IPL 2026: ತವರಿನಲ್ಲೇ ಮುಂಬೈ ಬೇಟೆಯಾಡಿದ ಹೈದರಾಬಾದ್ ಕಂಡು ಗಳಗಳನೆ ಕಣ್ಣೀರಿಟ್ಟ ನೀತಾ ಅಂಬಾನಿ; ಭಯದಿಂದ ಕುಳಿತ ಆಕಾಶ್ ಅಂಬಾನಿ!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ( ಏಪ್ರಿಲ್ 29 ) ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.

ಹೀಗೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಬೃಹತ್ ಮೊತ್ತ ಕಲೆಹಾಕಿದರೂ ಸಹ ಗೆಲ್ಲಲಾಗದೇ ಪರದಾಡಿದ ಮುಂಬೈ ಇಂಡಿಯನ್ಸ್ ಕಂಡು ಅಭಿಮಾನಿಗಳು ನಿರಾಸೆಗೊಳಗಾದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ಟ್ರಾವಿಸ್ ಹೆಡ್ ಸಿಕ್ಸರ್ ಬಾರಿಸಿ ಅಬ್ಬರಿಸುತ್ತಿದ್ದದ್ದನ್ನು ಕಂಡು ಕಣ್ಣೀರಿಟ್ಟರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ದೃಶ್ಯ ಲೈವ್‌ನಲ್ಲಿ ಸೆರೆಯಾಗಿದ್ದು, ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡ ಅಭಿಮಾನಿಗಳು ಪಂದ್ಯ ಮುಗಿದ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದೇ ಫೋಟೊದಲ್ಲಿ ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ ಸಹ ಭಯದಿಂದ ಸನ್‌ರೈಸರ್ಸ್ ಆರ್ಭಟ ವೀಕ್ಷಿಸುತ್ತಿರುವುದನ್ನೂ ಸಹ ಕಾಣಬಹುದಾಗಿದೆ.

ಐದು ಬಾರಿ ಟ್ರೋಫಿ ಎತ್ತಿ ಮೆರೆದ ತಂಡದ ಮಾಲೀಕರು ಸದ್ಯ ತಮ್ಮ ತಂಡ ಇಂಥ ಹೀನಾಯ ಪರಿಸ್ಥಿತಿ ತಲುಪಿದ್ದನ್ನು ಕಂಡು ಕುಗ್ಗಿಹೋಗಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular