HomeIPL 2026ಮೊನ್ನೆಯಷ್ಟೇ ಅಗಲಿದ ತಾಯಿ, ನಿನ್ನೆ ಮುಂಬೈ ವಿರುದ್ಧ ಕಣಕ್ಕಿಳಿದು ವಿಕೆಟ್ ಪಡೆದು ತಾಯಿ ನೆನೆದ ಸಿಎಸ್‌ಕೆ...

ಮೊನ್ನೆಯಷ್ಟೇ ಅಗಲಿದ ತಾಯಿ, ನಿನ್ನೆ ಮುಂಬೈ ವಿರುದ್ಧ ಕಣಕ್ಕಿಳಿದು ವಿಕೆಟ್ ಪಡೆದು ತಾಯಿ ನೆನೆದ ಸಿಎಸ್‌ಕೆ ಆಟಗಾರ; ವಿಡಿಯೊ

ನಿನ್ನೆ ( ಏಪ್ರಿಲ್ 23 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 104 ರನ್‌ಗೆ ಆಲ್‌ಔಟ್ ಆಯಿತು.

ಚೆನ್ನೈ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಮುಂದಾದ ಮುಂಬೈ ಇಂಡಿಯನ್ಸ್ ಚೆನ್ನೈ ಬೌಲಿಂಗ್ ದಾಳಿಗೆ ನಲುಗಿ ತವರಿನಲ್ಲೇ ತಬ್ಬಿಬ್ಬಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಅಕೈಲ್ ಹೊಸೈನ್ ನಾಲ್ಕು ವಿಕೆಟ್, ನೂರ್ ಅಹ್ಮದ್ ಎರಡು ವಿಕೆಟ್, ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಹಾಗೂ ಗುರ್ಜನ್‌ಪ್ರೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್‌ ಗೆಲುವಿನ ಆಸೆಗೆ ತಣ್ಣೀರೆರೆಚಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಮುಕೇಶ್ ಚೌಧರಿ ಮೊನ್ನೆ ( ಏಪ್ರಿಲ್ 22 ) ತನ್ನ ತಾಯಿ ಪ್ರೇಮ್ ದೇವಿಯನ್ನು ಕಳೆದುಕೊಂಡರು. ಹಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಹೀಗಾಗಿ ರಾಜಸ್ಥಾನದ ಬಿಲ್ವಾರಕ್ಕೆ ತೆರಳಿದ್ದ ಮುಕೇಶ್ ಚೌಧರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಿನ್ನೆ ( ಏಪ್ರಿಲ್ 23 ) ವಾಪಸ್ ಮುಂಬೈಗೆ ಮರಳಿ ತಾಯಿ ಅಗಲಿದ ದುಃಖದಲ್ಲೇ ಕಣಕ್ಕಿಳಿದು ಆಟವಾಡಿದ್ದಾರೆ. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಮುಕೇಶ್ ಚೌಧರಿ ಆಕಾಶ ನೋಡುತ್ತಾ ವಿಕೆಟನ್ನು ತನ್ ತಾಯಿಗೆ ಅರ್ಪಿಸಿ ನೆನೆದು ಭಾವುಕರಾದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular