HomeIPL 2026IPL 2026: ಪಂದ್ಯದ ವೇಳೆ ಡೆಲ್ಲಿ ಆಟಗಾರನಿಗೆ ಪೆಟ್ಟು; ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ...

IPL 2026: ಪಂದ್ಯದ ವೇಳೆ ಡೆಲ್ಲಿ ಆಟಗಾರನಿಗೆ ಪೆಟ್ಟು; ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೈದಾನಕ್ಕೆ ಬಂದ ಆಂಬುಲೆನ್ಸ್

ನಿನ್ನೆ ( ಏಪ್ರಿಲ್ 25 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 35ನೇ ಪಂದ್ಯ ಐಪಿಎಲ್ ಇತಿಹಾಸದ ಅತಿದೊಡ್ಡ ಚೇಸ್ ಪಂದ್ಯ ಎಂಬ ಬೃಹತ್ ದಾಖಲೆಗೆ ಕಾರಣವಾಯಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್ ಅಬ್ಬರದ ಅರ್ಧಶತಕ ಹಾಗೂ ನಿತಿಶ್ ರಾಣಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.

ಈ ಮಹಾ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಹಾಗೂ ಆಟಗಾರರು ಒಂದು ಕ್ಷಣ ತೀವ್ರ ಆತಂಕಕ್ಕೀಡಾದ ಘಟನೆ ಸಂಭವಿಸಿತು. ಪಂಜಾಬ್ ಚೇಸ್ ಮಾಡುವ ವೇಳೆ ಡೆಲ್ಲಿ ಬೌಲರ್ ಲುಂಗಿ ಎನ್‌ಗಿಡಿ ಕ್ಯಾಚ್ ಪಡೆಯುವ ಯತ್ನದಲ್ಲಿ ಹಿಂದೆ ಸಾಗುವಾಗ ಆಯತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಳಗೆಬಿದ್ದ ಕೂಡಲೇ ತಲೆ ಹಿಡಿದುಕೊಂಡು ನೋವನುಭವಿಸಲಾರಂಭಿಸಿದ ಎನ್‌ಗಿಡಿ ಕಂಡು ಸ್ಥಳಕ್ಕೆ ಧಾವಿಸಿದ ವೈದ್ಯರು ಪರಿಶೀಲಿಸಿ, ಅವರನ್ನು ಆಸ್ಪತ್ರೆಗೆ ರವಾನಿಸಲು ಮುಂದಾದರು. ಹೀಗಾಗಿ ಇದೇ ಮೊದಲ ಬಾರಿಗೆ ಆಂಬುಲೆನ್ಸ್ ಐಪಿಎಲ್ ಮೈದಾನ ಪ್ರವೇಶಿಸಿತ್ತು. ಅವರನ್ನು ಬಿಎಲ್‌ಕೆ – ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ತುರ್ತು ಪರಿಸ್ಥಿತಿಯ ವಿಷಯ ತಿಳಿದ ಕೂಡಲೇ ಟ್ರಾಫಿಕ್ ಎಸಿಪಿ ಸಂಜಯ್ ಸಿಂಗ್ ಕಂಟ್ರೋಲ್ ರೂಮ್‌ ಜತೆ ಮಾತುಕತೆ ನಡೆಸಿ ಗ್ರೀನ್ ಕಾರಿಡಾರ್ ಜಾರಿಗೆ ತಂದು ಆಂಬುಲೆನ್ಸ್ ಬೇಗನೆ ಆಸ್ಪತ್ರೆ ತಲುಪಲು ಸಹಾಯ ಮಾಡಿದರು.

ಆಸ್ಪತ್ರೆಯಲ್ಲಿ ಸಿಟ ಸ್ಕ್ಯಾನ್ ನಡೆಸಿ ಯಾವುದೇ ತೊಂದರೆಯಿಲ್ಲ ಎಂದು ವರದಿ ಬಂದ ಬಳಿಕ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಎನ್‌ಗಿಡಿ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ಹಂಚಿಕೊಂಡಿತು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular