HomeIPL 2026ಮುಂಬೈ ವಿರುದ್ಧ ರಾಜಸ್ಥಾನ್ ಗೆದ್ದರೆ ಮಾತ್ರ ಪ್ಲೇಆಫ್, ಸೋತರೆ ಪಂಜಾಬ್‌ಗೆ ಚಾನ್ಸ್: ಮುಂಬೈ ಆಡುವ ಬಳಗ...

ಮುಂಬೈ ವಿರುದ್ಧ ರಾಜಸ್ಥಾನ್ ಗೆದ್ದರೆ ಮಾತ್ರ ಪ್ಲೇಆಫ್, ಸೋತರೆ ಪಂಜಾಬ್‌ಗೆ ಚಾನ್ಸ್: ಮುಂಬೈ ಆಡುವ ಬಳಗ ನೋಡಿಯೇ ಕುಣಿದು ಕುಪ್ಪಳಿಸಿದ ರಾಜಸ್ಥಾನ್; ತಲೆ ಮೇಲೆ ಕೈಹೊತ್ತ ಪಂಜಾಬ್!

ಇಂದು ( ಮೇ 24 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ಕೊನೆಯ ದಿನದ ಪಂದ್ಯಗಳು ನಡೆಯುತ್ತಿವೆ.

ಮಧ್ಯಾಹ್ನ ನಡೆಯುತ್ತಿರುವ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಸಂಜೆ ನಡೆಯುತ್ತಿರುವ 70ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.

ಇನ್ನು ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಂದ್ಯದ ಫಲಿತಾಂಶ ಪ್ಲೇಆಫ್ ಸುತ್ತಿನ ಕೊನೆಯ ಸ್ಪರ್ಧಿ ಯಾರು ಎಂಬುದನ್ನು ನಿರ್ಧರಿಸುವ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಏಕೆಂದರೆ 14 ಅಂಕಗಳನ್ನು ಗಳಿಸಿರುವ ರಾಜಸ್ಥಾನ್ ರಾಯಲ್ಸ್ ಈ ಪಂದ್ಯ ಗೆದ್ದರೆ 16 ಅಂಕಗಳನ್ನು ಹೊಂದಲಿದ್ದು, ನೇರವಾಗಿ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಒಂದುವೇಳೆ ಈ ಪಂದ್ಯದಲ್ಲಿ ಮುಂಬೈ ಗೆದ್ದರೆ 15 ಅಂಕ ಹೊಂದಿರುವ ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ ಅವಕಾಶ ಸಿಗಲಿದೆ. ಅಲ್ಲದೇ ಸಂಜೆ ಡೆಲ್ಲಿ ವಿರುದ್ಧ ಕೆಕೆಆರ್ ಗೆದ್ದು 15 ಅಂಕ ಹೊಂದಿ ಪಂಜಾಬ್‌ಗಿಂತ ಒಳ್ಳೆಯ ನೆಟ್ ರನ್ ರೇಟ್ ಸಂಪಾದಿಸಿದರೆ ಈ ತಂಡ ಪ್ಲೇಆಫ್ ತಲುಪಲಿದೆ.

ಹೀಗಾಗಿ ರಾಜಸ್ತಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ನಿನ್ನೆ ಪಂಜಾಬ್ ಲಕ್ನೋ ್ವವಿರುದ್ಧ ಗೆದ್ದ ಬಳಿಕ ನಾಯಕ ಶ್ರೇಯಸ್ ಐಯ್ಯರ್ ಮಾತನಾಡಿ ನಾಳೆ ನಾವು ಮುಂಬೈಗೆ ಬೆಂಬಲ ನೀಡುತ್ತೇವೆ ಎಂದಿದ್ದರು ಹಾಗೂ ಪರೋಕ್ಷವಾಗಿ ತಾವು ಪ್ಲೇಆಫ್ ತಲುಪಲು ಮುಂಬೈ ಸಹಾಯ ಬೇಕು ಎಂದಿದ್ದರು.

ಹೀಗೆ ಭಾರೀ ಕುತೈಹಲ ಕೆರಳಿಸಿರುವ ಪಂದ್ಯದಲ್ಲಿ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಇದನ್ನು ಕಂಡು ರಾಜಸ್ತಾನ್ ರಾಯಲ್ಸ್ ಕುಣಿದು ಕುಪ್ಪಳಿಸಿದರೆ, ಪಂಜಾಬ್ ಕಿಂಗ್ಸ್ ತಲೆ ಮೇಲೆ ಕೈಹೊತ್ತಿದೆ.

ಹೌದು, ಮುಂಬೈ ಇಂಡಿಯನ್ಸ್ ಆಡುವ ಬಳಗದಲ್ಲಿ ಇಂದು ಜಸ್‌ಪ್ರೀತ್ ಬುಮ್ರಾ ಇಲ್ಲ. ಬದಲಾಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿದಿದ್ದಾರೆ. ಬುಮ್ರಾ ಇಲ್ಲದಿರುವುದು ರಾಜಸ್ಥಾನ್‌ಗೆ ಆತ್ಮಸ್ಥೈರ್ಯ ಹೆಚ್ಚಿಸಿದರೆ, ಪಂಜಾಬ್ ಕಿಂಗ್ಸ್‌ಗೆ ಇದು ತಲೆ ನೋವಾಗಿ ಪರಿಣಿಮಿಸಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular