HomeIPL 2026ಇಂದು ಮುಂಬೈ vs ಹೈದರಾಬಾದ್: ಕಳೆದ ವರ್ಷದ ಹಾಗೆ ವೈಡ್‌ಗೂ ಔಟ್ ಕೊಟ್ಟು ಹೈದರಾಬಾದ್‌ಗೆ ಮೋಸ...

ಇಂದು ಮುಂಬೈ vs ಹೈದರಾಬಾದ್: ಕಳೆದ ವರ್ಷದ ಹಾಗೆ ವೈಡ್‌ಗೂ ಔಟ್ ಕೊಟ್ಟು ಹೈದರಾಬಾದ್‌ಗೆ ಮೋಸ ಮಾಡಬೇಡಿ ಎಂದು ವಿಡಿಯೊ ಹಾಕಿ ಅಂಪೈರ್ ಕಾಲೆಳೆದ ನೆಟ್ಟಿಗರು!

ಇಂದು ( ಏಪ್ರಿಲ್ 29 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು ಮೂರರಲ್ಲಿ ಸೋತು 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್ ಹಾದಿಯನ್ನು ಇನ್ನಷ್ಟು ಸುಲಭ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ 7 ಪಂದ್ಯಗಳನ್ನಾಡಿ ಎರಡರಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಕೇವಲ 4 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದು, ಈ ಪಂದ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಂತಾಗಿದೆ.

ಹೀಗೆ ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ. ಅದೇ ವೇಳೆ ಕಳೆದ ವರ್ಷ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಸಂಭವಿಸಿದ್ದ ಅನುಮಾನಾಸ್ಪದ ಅಂಪೈರ್ ನಿರ್ಣಯವೊಂದರ ಕುರಿತು ಸಹ ಚರ್ಚೆಗಳು ನಡೆಯುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, 2025ರ ಏಪ್ರಿಲ್ 23ರಂದು ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ 144 ರನ್‌ಗಳ ಗುರಿಯನ್ನು 15.4 ಓವರ್‌ಗಳಲ್ಲಿ ಬೆನ್ನಟ್ಟಿದ್ದ ಮುಂಬೈ 7 ವಿಕೆಟ್‌ಗಳ ಗೆಲುವನ್ನು ಸಾಧಿಸಿತ್ತು. ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ದೀಪಕ್ ಚಹರ್ ಎಸೆದ ಮೂರನೇ ಒವರ್‌ನ ಮೊದಲ ಎಸೆತಕ್ಕೆ ಇಶಾನ್ ಕಿಶನ್ ಔಟ್ ಎಂದು ನಿರ್ಣಯ ನೀಡಲಾಯಿತು.

ಚಹರ್ ಎಸೆದ ಎಸೆತ ವೈಡ್ ಆಗಿತ್ತು, ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ. ಆದರೂ ಸಹ ಇಶಾನ್ ಕಿಶನ್ ಔಟ್ ಎಂದು ಹೊರಡಲಾರಂಭಿಸಿದ್ದರು. ಸ್ವತಃ ಬೌಲರ್ ದೀಪಕ್ ಚಹರ್ ವೈಡ್ ಎಂದು ಭಾವಿಸಿದ್ದರು. ಅಂಪೈರ್ ಸಹ ವೈಡ್ ಎಂದು ನಿರ್ಣಯ ನೀಡಲು ಕೈ ಎತ್ತಿ ಬಳಿಕ ಔಟ್ ಎಂದು ನೀಡಿದರು. ವೈಡ್ ಇದ್ದರೂ ಸಹ ಥರ್ಡ್ ಅಂಪೈರ್ ಅದನ್ನು ಪರಿಶೀಲಿಸದೇ ಇದ್ದದ್ದು ಟೀಕೆಗಳಿಗೆ ಎಡೆಮಾಡಿಕೊಟ್ಟಿತ್ತು. ಈ ವಿಡಿಯೊವನ್ನು ಮತ್ತೆ ಹಂಚಿಕೊಂಡಿರುವ ನೆಟ್ಟಿಗರು ಇಂದಿನ ಪಂದ್ಯದಲ್ಲಿ ಹೀಗೆ ನಡೆಯಲು ಬಿಡಬೇಡಿ ಎಂದು ಕಾಲೆಳೆಯುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular