HomeLatest NewsIPL 2026: ತಾನೇ ಕೇವಲ 1 ರನ್ ಬಾರಿಸಿ ಆ ಇಬ್ಬರು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ...

IPL 2026: ತಾನೇ ಕೇವಲ 1 ರನ್ ಬಾರಿಸಿ ಆ ಇಬ್ಬರು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ ಹಾಗಾಗಿ ಚೆನ್ನೈ ವಿರುದ್ಧ ಸೋತೆವು ಎಂದ ಪಾಂಡ್ಯ!

ನಿನ್ನೆ ( ಏಪ್ರಿಲ್ 23 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 19ನೇ ಆವೃತ್ತಿಯ ಲೀಗ್ ಹಂತದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 104 ರನ್‌ಗೆ ಆಲ್‌ಔಟ್ ಆಯಿತು.

ಹೀಗೆ ತವರಿನಲ್ಲೇ ಮತ್ತೊಂದು ಭಾರೀ ಮುಖಭಂಗ ಅನುಭವಿಸಿದ ಪಾಂಡ್ಯ ಪಡೆ ಟೂರ್ನಿಯಲ್ಲಿ ಐದನೇ ಸೋಲನ್ನು ಕಂಡು ಪ್ಲೇಆಫ್ ತಲುಪಲಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನೈ ಪರ ಸಂಜು ಸ್ಯಾಮ್ಸನ್ ಸೆಂಚುರಿ ಬಾರಿಸಿದರೆ, ಅತ್ತ ಮುಂಬೈ ಪರ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ ಎರಡಂಕಿ ಮುಟ್ಟಲಿಲ್ಲ .

ಹೀಗೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣ ಸೋತ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಮುಗಿದ ಬಳಿಕ ಈ ಕುರಿತು ಮಾತನಾಡಿ ಸೋಲಿಗೆ ಕಾರಣ ತಿಳಿಸಿದರು. ‘ಪವರ್‌ಪ್ಲೇನಲ್ಲಿ ವೇಗವಾಗಿ ವಿಕೆಟ್ ಕಳೆದುಕೊಂಡರೆ ಯಾವಾಗಲೂ ಕಷ್ಟ. ಈ ರೀತಿ ಆದರೆ ಚೇಸ್ ಮಾಡುವುದು ಕಠಿಣ. ಬೇರೆಯವರ ರೀತಿ ಪಿಚ್‌ನಿಂದ ಸೋತೆವು ಎನ್ನುವ ವ್ಯಕ್ತಿ ನಾನಲ್ಲ. ಅವರು ಚೆನ್ನಾಗಿ ಬ್ಯಾಟ್ ಮಾಡಿ 207 ರನ್ ದಾಖಲಿಸಿದ ಪಿಚ್‌ನಲ್ಲೇ ನಾವು ಚೆನ್ನಾಗಿ ಆಡಬೇಕಿತ್ತು. ಸ್ಪಿನ್ನರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮ ತಂಡದ ಸ್ಪಿನ್ನರ್‌ಗಳೂ ಸಹ ಚೆನ್ನಾಗಿ ಆಡಿದರು. ಸಂಜು ಅದ್ಭುತ ಆಟವನ್ನಾಡಿದರು, ಅದೇ ಸಮಯಕ್ಕೆ ಇತರ ಆಟಗಾರರು ಆಗಮಿಸಿ ಕೊಡುಗೆ ನೀಡಿ ಒಳ್ಳೆಯ ಮೊತ್ತ ಕಲೆಹಾಕಿದರು. ಈ ಮೊತ್ತವನ್ನು ಕಲೆಹಾಕಲು ನಮಗೆ ಒಳ್ಳೆಯ ಪವರ್‌ಪ್ಲೇ ಬೇಕಿತ್ತು. ಪವರ್‌ಪ್ಲೇ ಚೆನ್ನಾಗಿ ಬಂದಿದ್ದರೆ ಉಳಿದ ಓವರ್‌ಗಳಲ್ಲಿ ಚೆನ್ನಾಗಿ ಆಡಬಹುದಿತ್ತು’ ಎಂದರು.

ಮೂಲಕ ಆರಂಭಿಕ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹಾರ್ದಿಕ್ ಮಾತನಾಡಿದ್ದಾರೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 7 ರನ್ ಹಾಗೂ ಡ್ಯಾನಿಷ್ ಮಲೆವರ್ ಡಕ್‌ಔಟ್ ಆದರೆ, ಬೆನ್ನಲ್ಲೇ ನಮನ್ ಧೀರ್ ಡಕ್‌ಔಟ್ ಆದರು. ಈ ಮೂಲಕ ಕೇವಲ 11 ರನ್‌ಗೆ 3 ವಿಕೆಟ್ ಕಳೆದುಕೊಂಡ ಮುಂಬೈ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ 73 ರನ್‌ಗಳ ಜತೆಯಾಟವಾಡುವ ಮೂಲಕ ಸುಧಾರಣೆ ತಂದರು. ಅಲ್ಲಿಗೆ ತಂಡ 84 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಸಮಯದಲ್ಲಿ ಕಣಕ್ಕಿಳಿದ ಪಾಂಡ್ಯ ಇನ್ನೂ ಎಂಟು ಓವರ್ ಬಾಕಿ ಇರುವಾಗ ಜವಾಬ್ದಾರಿಯುತ ಆಡವನ್ನಾಡಿ ಇನ್ನಿಂಗ್ಸ್ ಕಟ್ಟದೇ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿ ಪಂದ್ಯ ಸಂಪೂರ್ಣವಾಗಿ ಸಿಎಸ್‌ಕೆ ಕಡೆ ವಾಲುವ ಹಾಗೆ ಮಾಡಿ ಪವರ್‌ಪ್ಲೇ ಬಗ್ಗೆ ಮಾತನಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುಹಾಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular