HomeLatest NewsIPL 2026: ಇಂದು ರಾಜಸ್ಥಾನ್ vs ಗುಜರಾತ್ ಪಂದ್ಯದಲ್ಲಿ ಗೆದ್ದವರು ಆರ್‌ಸಿಬಿ ವಿರುದ್ಧ ಫೈನಲ್‌ಗೆ; ಮಳೆಯಿಂದ...

IPL 2026: ಇಂದು ರಾಜಸ್ಥಾನ್ vs ಗುಜರಾತ್ ಪಂದ್ಯದಲ್ಲಿ ಗೆದ್ದವರು ಆರ್‌ಸಿಬಿ ವಿರುದ್ಧ ಫೈನಲ್‌ಗೆ; ಮಳೆಯಿಂದ ಪಂದ್ಯ ರದ್ದಾದರೆ ಯಾರು ಫೈನಲ್ ಪ್ರವೇಶ?

2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇನ್ನೆರಡು ಪಂದ್ಯಗಳು ಬಾಕಿ ಇವೆ ಅಷ್ಟೇ. ಇಂದು ( ಮೇ 29 ) ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದ್ದು, ನಾಡಿದ್ದು ( ಮೇ 31 ) ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಕ್ವಾಲಿಫಯರ್ ಒಂದನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಫೈನಲ್ ತಲುಪಿದ್ದು, ಇಂದು ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.

ಇನ್ನು ಇಂದಿನ ಪಂದ್ಯ ನ್ಯೂ ಚಂಡೀಗಢ್‌ನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಒಂದರಲ್ಲಿ ಸೋತ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಬಂದಿರುವ ರಾಜಸ್ಥಾನ್ ರಾಯಲ್ಸ್ ಸೆಣಸಾಟ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಪಂಜಾಬ್ ಹವಾಮಾನ ಇಲಾಖೆ ರಾಜ್ಯದ ಹಲವಾರು ಪ್ರದೇಶಗಳಿಗೆ ಇಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಸದ್ಯ ಈ ಪಟ್ಟಿಯಲ್ಲಿ ಮುಲ್ಲಾನ್‌ಪುರ ಹೆಸರಿಲ್ಲ. ಆದರೆ ಪಂದ್ಯದ ವೇಳೆ ಮಳೆರಾಯ ಒಂದು ಸಣ್ಣ ಪ್ರವೇಶ ನೀಡಬಹುದು ಎನ್ನಲಾಗಿದೆ.

ಹೀಗಿರುವಾಗ ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟುಮಾಡಿ ಪಂದ್ಯ ರದ್ದಾದರೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರ ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಒಂದುವೇಳೆ ಮಳೆ ಬಂದರೆ ಪಂದ್ಯ ಆರಂಭಿಸಲು 120 ನಿಮಿಷ ಹೆಚ್ಚುವರಿ ಸಮಯವಿರಲಿದೆ. ಹೀಗೂ ಸಹ ಪಂದ್ಯ ಶುರುವಾಗದೇ ಇದ್ದರೆ ಪಂದ್ಯ ರದ್ದಾಗಿ ಅಂಕಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆದು ಕ್ವಾಲಿಫಯರ್ ಒಂದರಲ್ಲಿ ಕಣಕ್ಕಿಳಿದಿದ್ದ ಗುಜರಾತ್ ಟೈಟನ್ಸ್ ಫೈನಲ್‌ಗೆ ಲಗ್ಗೆ ಇಡಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular