HomeKarnatakaಮಗು ಮಾರಾಟಕ್ಕೆ ಒಪ್ಪಲಿಲ್ಲ, ತವರಿನಿಂದ ಹಣ ತರುತ್ತಿಲ್ಲ ಎಂದು ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ

ಮಗು ಮಾರಾಟಕ್ಕೆ ಒಪ್ಪಲಿಲ್ಲ, ತವರಿನಿಂದ ಹಣ ತರುತ್ತಿಲ್ಲ ಎಂದು ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ

ಹಾಸನ: ಮಗು ಮಾರಾಟಕ್ಕೆ ವಿರೋಧಿಸಿದ್ದಕ್ಕೆ ಹಾಗೂ ತವರಿನಿಂದ ವರದಕ್ಷಿಣೆಯ ಹಣ ತರಲಿಲ್ಲ ಎಂದು ಪತಿಮಹಾಶಯನೊಬ್ಬ ಪತ್ನಿಯನ್ನು ಕೊಲೆಗೈದ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ನಗರದ ಟಿಪ್ಪು ನಗರದಲ್ಲಿ ಈ ಘಟನೆ ನಡೆದಿದೆ. ಗುಲ್‌ಶೀರ್ ಭಾನು (31) ಕೊಲೆಯಾದ ಮಹಿಳೆ. ಪತಿ ಸೈಫುಲ್ಲಾ (37), ಅತ್ತೆ, ಮಾವ, ಕುಟುಂಬದವರು ಸೇರಿ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಲ್‌ಶೀರ್ ಭಾನು ಅವರನ್ನು ಚನ್ನರಾಯಪಟ್ಟಣ ನಗರದ ಟಿಪ್ಪು ನಗರದ ನಿವಾಸಿ ಸೈಫುಲ್ಲಾ ಎಂಬಾತನಿಗೆ 13 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಒಂದೆರಡು ವರ್ಷ ಚೆನ್ನಾಗಿದ್ದರು. ಹಣದ ಸಮಸ್ಯೆಯಿಂದಾಗಿ ಹುಟ್ಟಿದ ಗಂಡು ಮಗುವನ್ನು ಸೈಫುಲ್ಲಾ ಮಾರಾಟ ಮಾಡಿದ್ದ. ಇಲ್ಲಿಂದ ಪ್ರಾರಂಭವಾದ ಗಲಾಟೆ ನಿಂತಿರಲಿಲ್ಲ. ಅಲ್ಲದೆ ಮದ್ಯಪಾನ ಮತ್ತು ಇತರೆ ದುಷ್ಚಟಗಳಿಗೆ ದಾಸನಾಗಿದ್ದ. ವರದಕ್ಷಿಣೆಗಾಗಿ ಪದೇ ಪದೇ ಪತ್ನಿಯನ್ನು ಪೀಡಿಸುತ್ತಿದ್ದ. ಈಗ ಮತ್ತೆ ಹಣಕ್ಕಾಗಿ ಗಲಾಟೆ ಮಾಡಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ಗುಲ್ ಶಿರ್ ಬಾನು ಪೋಷಕರು, ನಮ್ಮ ಮಗಳಿಗೆ ಆತ ಕೊಡಬಾರದ ಚಿತ್ರಹಿಂಸೆ ಕೊಡುತ್ತಿದ್ದ. ಮಗಳು ಚೆನ್ನಾಗಿರಲಿ ಎಂದು ಹಣ, ಒಡವೆ ಸೇರಿದಂತೆ ಹಲವು ಬಾರಿ ಆತನಿಗೆ ಸಹಾಯ ಮಾಡಿದ್ದೆವು. ಹಾಸನದಲ್ಲೇ ಮನೆ ಮಾಡಿಕೊಟ್ಟಿದ್ದರೂ ಅಲ್ಲಿಯೂ ವಾಸವಿರುತ್ತಿರಲಿಲ್ಲ. ಹಾಸನ ಮತ್ತು ಚನ್ನರಾಯಪಟ್ಟಣದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಹಲವು ಬಾರಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೂ ಬುದ್ದಿ ಕಲಿಯದೆ ಈಗ ನನ್ನ ಮಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಬಕ್ರೀದ್ ಹಬ್ಬದ ದಿನವೇ ಮಧ್ಯಾಹ್ನ ನಾನು ಮತ್ತು ಗುಲ್‌ಶೀರ್ ಭಾನು ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದೆವು. ಸ್ಥಳಕ್ಕೆ ಬಂದ ಗಂಡ ಮತ್ತು ಅವನ ಪೋಷಕರು ಆಕೆಯೊಂದಿಗೆ ಗಲಾಟೆ ಮಾಡಿ ಹಲ್ಲೆ ಮಾಡಿ ಎಳೆದುಕೊಂಡು ಹೋದರು. ಸಂಜೆ ವೇಳೆಗೆ ಆಕೆ ಮೃತಪಟ್ಟ ವಿಷಯ ತಿಳಿಸಿದ್ದಾರೆ. ಇವರೆಲ್ಲರೂ ನೀಡಿದ ಚಿತ್ರ ಹಿಂಸೆಯಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಸ್ಥಳೀಯ ಮಹಿಳೆ ಫಾತಿಮಾ ಕೂಡ ಕಣ್ಣೀರಿಟ್ಟಿದ್ದಾರೆ.

ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಪತಿ ಹಾಗೂ ಅತ್ತೆ, ಮಾವ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular