HomeLatest NewsIPL 2026: ಆರೆಂಜ್ ಕ್ಯಾಪ್ ಸೇರಿ 5 ಅವಾರ್ಡ್ ಪಡೆದ 15 ವರ್ಷದ ಸೂರ್ಯವಂಶಿ ಗೆದ್ದ...

IPL 2026: ಆರೆಂಜ್ ಕ್ಯಾಪ್ ಸೇರಿ 5 ಅವಾರ್ಡ್ ಪಡೆದ 15 ವರ್ಷದ ಸೂರ್ಯವಂಶಿ ಗೆದ್ದ ಒಟ್ಟು ಹಣವೆಷ್ಟು ಗೊತ್ತಾ? ಒಂದೇ ದಿನಕ್ಕೆ ಲಕ್ಷಗಳ ಸುರಿಮಳೆ!

ನಿನ್ನೆ ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದ ಮತ್ತೊಂದು ಅಮೋಘ ಐಪಿಎಲ್ ಫೈನಲ್‌ಗೆ ಸಾಕ್ಷಿಯಾಯಿತು. ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ಆರ್‌ಸಿಬಿ ಕಪ್ ಗೆದ್ದ ಬಳಿಕ ಟ್ರೋಫಿ ವಿತರಣೆ ನಡೆಯಿತು. ಆಟಗಾರರು ಸತತ ಎರಡನೇ ವರ್ಷ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದರೆ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇತರೆ ಆಟಗಾರರಿಗೂ ಸಹ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ 15 ವರ್ಷದ ವೈಭವ್ ಸೂರ್ಯವಂಶಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡು ಆರೆಂಕ್ ಕ್ಯಾಪ್ ಪಡೆದದ್ದು ಮಾತ್ರವಲ್ಲದೇ ಐದು ವಿಭಿನ್ನ ಅವಾರ್ಡ್‌ಗಳನ್ನು ಗೆದ್ದಿದ್ದಾರೆ. ಅವುಗಳು ಯಾವುವು ಹಾಗೂ ವೈಭವ್ ಗೆದ್ದ ಬಹುಮಾನ ಧನವೆಷ್ಟು ಎಂಬ ಮಾಹಿತಿ ಮುಂದಿದೆ.

ಆರೆಂಜ್ ಕ್ಯಾಪ್ – 10 ಲಕ್ಷ

ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ – 10 ಲಕ್ಷ

ಎಮರ್ಜಿಂಗ್ ಪ್ಲೇಯರ್ ಆಫ್ ದ ಸೀಸನ್ – 10 ಲಕ್ಷ

ಸೂಪರ್ ಸಿಕ್ಸಸ್ – 10 ಲಕ್ಷ

ಸೂಪರ್ ಸ್ಟ್ರೈಕರ್ – 10 ಲಕ್ಷ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular