HomeIPL 2026IPL 2026: ನಮ್ಮಲ್ಲಿ ಪಂದ್ಯ ಗೆಲ್ಲಿಸುವ ಒಬ್ಬನೂ ಇಲ್ಲ; ಸೋಲಿಗೆ ತಾನೇ ಕಾರಣನಾದರೂ ಒಪ್ಪಿಕೊಳ್ಳದ ಕೆಕೆಆರ್...

IPL 2026: ನಮ್ಮಲ್ಲಿ ಪಂದ್ಯ ಗೆಲ್ಲಿಸುವ ಒಬ್ಬನೂ ಇಲ್ಲ; ಸೋಲಿಗೆ ತಾನೇ ಕಾರಣನಾದರೂ ಒಪ್ಪಿಕೊಳ್ಳದ ಕೆಕೆಆರ್ ನಾಯಕ ರಹಾನೆ!

ನಿನ್ನೆ ( ಏಪ್ರಿಲ್ 14 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 22ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 32 ರನ್‌ಗಳ ಗೆಲುವನ್ನು ಕಂಡು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ ಹಾಗೂ ಡಿವಾಲ್ಡ್ ಬ್ರೆವಿಸ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು.

ಹೀಗೆ ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು 200ಕ್ಕಿಂತ ಕಡಿಮೆ ರನ್ ಬಾರಿಸಿ ಅದನ್ನು ಎದುರಾಳಿ ತಂಡ ಬೆನ್ನಟ್ಟಲು ಬಿಡದೆ ಡಿಫೆಂಡ್ ಮಾಡಿದ ಸಾಧನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸೋಲಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿ ಗೆಲುವು ಕಾಣುವ ತನ್ನ ಕನಸನ್ನು ಮತ್ತೆ ಮುಂದೂಡಿದ್ದು, ಪಂದ್ಯದ ಬಳಿಕ ತಂಡದ ನಾಯಕ ಅಜಿಂಕ್ಯ ರಹಾನೆ ಸೋಲಿಗೆ ಕಾರಣ ತಿಳಿಸಿದ್ದಾರೆ.

ಸೋಲಿನ ಕುರಿತು ಮಾತನಾಡಿದ ರಹಾನೆ ತನ್ನ ಹಾಗೂ ಮ್ಯಾನೇಜ್‌ಮೆಂಟ್‌ನ ಕೆಲ ತಪ್ಪುಗಳನ್ನು ಒಪ್ಪಿಕೊಳ್ಳದೇ ಮಧ್ಯದಲ್ಲಿ ಓರ್ವ ಬ್ಯಾಟ್ಸ್‌ಮನ್ ಕೊನೆಯವರೆಗೂ ನಿಂತು ಬ್ಯಾಟ್ ಮಾಡಬೇಕಿತ್ತು ಎಂದಿದ್ದಾರೆ. ‘ಪವರ್‌ಪ್ಲೇನಲ್ಲಿ 70 ರನ್ ಬಾರಿಸಿದ್ದ ಚೆನ್ನೈ ತಂಡವನ್ನು ಅಂತಿಮವಾಗಿ 190 ರನ್‌ಗೆ ಕಟ್ಟಿಹಾಕಿದ್ದು ಬೌಲರ್‌ಗಳ ಉತ್ತಮ ಪ್ರದರ್ಶನ. ಆದರೆ ನಮ್ಮ ಬ್ಯಾಟಿಂಗ್ ಪವರ್‌ಪ್ಲೇನಲ್ಲಿ 36 ಅಥವಾ 37 ರನ್ ಮಾತ್ರ ಪಡೆದುಕೊಂಡೆವು. ಇದು ಬಹುಮುಖ್ಯದ್ದಾಗಿತ್ತು ಎಂದು ನನಗೆ ಎನಿಸುತ್ತದೆ. ಮಧ್ಯದಲ್ಲಿ ಸ್ಪಿನ್ನರ್‌ಗಳಿಗೆ ಬಾರಿಸುವುದು ಭಾರೀ ಕಷ್ಟವಾಗಿತ್ತು. ನಮಗೆ ಮಧ್ಯದಲ್ಲಿ ಚೆನ್ನಾಗಿ ಆಡಿ ಕೊನೆಯವರೆಗೂ ಆಟವನ್ನು ಕೊಂಡೊಯ್ಯವ ಆಟಗಾರನ ಅಗತ್ಯವಿತ್ತು’ ಎಂದಿದ್ದಾರೆ.

ಈ ಮೂಲಕ ರಹಾನೆ ಆರಂಭಿಕ ಜೋಡಿ ಕಡಿಮೆ ರನ್ ಬಾರಿಸಿತು ಹಾಗೂ ಮಧ್ಯದಲ್ಲಿ ಯಾರೂ ನಿಂತು ಆಡಲಿಲ್ಲ ಎಂದು ಬ್ಯಾಟ್ಸ್‌ಮನ್‌ಗಳ ಮೇಲೆ ಸೋಲಿನ ಭಾರವನ್ನು ಹಾಕಿದ್ದಾರೆ. ಆದರೆ ಅಸಲಿಯತ್ತಿಗೆ ನಿನ್ನೆಯ ಪಂದ್ಯದಲ್ಲಿ ಆರಂಭಿಕನಾಗಿ ತಾನು ಕಣಕ್ಕಿಳಿಯದೇ ಸ್ಪಿನ್ನರ್ ಸುನಿಲ್ ನರೇನ್‌ರನ್ನು ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡದ್ದು ಇದೇ ರಹಾನೆ. ಅಲ್ಲದೇ ಮೂರನೇ ಕ್ರಮಾಂಕದಲ್ಲಿ ಇಳಿದು 28 ರನ್‌ಗಳಿಗೆ ವಿಕೆಟ್ ಒಪ್ಪಿಸಿ ತೆರಳಿದ ರಹಾನೆ ಈ ನಿರ್ಧಾರದ ಬದಲು ಆರಂಭಿಕನಾಗಿ ಕಣಕ್ಕಿಳಿದು ಅರ್ಧಶತಕದ ಕೊಡುಗೆ ನೀಡಿ ಪವರ್‌ಪ್ಲೇನಲ್ಲಿ 70ರ ಗಡಿ ದಾಟಿಸಿದ್ದರೆ, ತಂಡಕ್ಕೆ ಬೇಕಾಗಿದ್ದ ಆರಂಭ ಸಿಕ್ಕಿರುತ್ತಿತ್ತು. ಹೀಗೆ ನಡೆದಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಯಾರಾದರೂ ಜವಾಬ್ದಾರಿ ಹೊರುತ್ತಿದ್ದರೇನೋ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular