HomeIPL 2026IPL 2026: 2ನೇ ಟ್ರೋಫಿ ಗೆದ್ದ ಆರ್‌ಸಿಬಿ; ಮ್ಯಾನೇಜ್‌ಮೆಂಟ್‌ಗೂ ಮುನ್ನವೇ 2ನೇ ಸ್ಟಾರ್ ಹಾಕಿದ ಎಬಿಡಿ,...

IPL 2026: 2ನೇ ಟ್ರೋಫಿ ಗೆದ್ದ ಆರ್‌ಸಿಬಿ; ಮ್ಯಾನೇಜ್‌ಮೆಂಟ್‌ಗೂ ಮುನ್ನವೇ 2ನೇ ಸ್ಟಾರ್ ಹಾಕಿದ ಎಬಿಡಿ, ಬ್ಯಾಕ್ ಟು ಬ್ಯಾಕ್ ಕಪ್ ಎಂದು ಕುಣಿದ ಗೇಲ್ | ವಿಡಿಯೊ

ನಿನ್ನೆ ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದ ಮತ್ತೊಂದು ಅಮೋಘ ಐಪಿಎಲ್ ಫೈನಲ್‌ಗೆ ಸಾಕ್ಷಿಯಾಯಿತು. ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ಈ ಗೆಲುವಿನೊಂದಿಗೆ 17 ವರ್ಷಗಳ ಕಾಲ ಟ್ರೋಫಿ ಇಲ್ಲದೇ ಹೀನಾಯವಾಗಿ ಟ್ರೋಲ್‌ಗೀಡಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತವಾಗಿ ಎರಡನೇ ಟ್ರೋಫಿ ಗೆದ್ದಿದ್ದು, ಈ ಮಹತ್ವದ ಘಳಿಗೆಯನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಆರ್‌ಸಿಬಿಯ ಮಾಜಿ ಕ್ರಿಕೆಟಿಗರೂ ಸಹ ತಾವಿದ್ದಾಗ ಆಗದಿದ್ದ ಘಟನೆಗೆ ಸಂಭ್ರಮಪಟ್ಟಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ಆರ್‌ಸಿಬಿ ಟ್ರೋಫಿ ಗೆದ್ದಾಗ ಮೈದಾನಕ್ಕೆ ಬಂದು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದ ಮಾಜಿ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಬಾರಿಯೂ ಸಹ ಸಂಭ್ರಮಾಚರಣೆ ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್ ಈ ಬಾರಿಯೂ ಕ್ರೀಡಾಂಗಣಕ್ಕೆ ಆಗಮಿಸಿದ್ದು, ಕೊಹ್ಲಿಯನ್ನು ಅಪ್ಪಿ ಸಂಭ್ರಮಿಸಿದ್ದರೆ, ಕ್ರಿಸ್ ಗೇಲ್ ಕಾರ್ಯಕ್ರಮವೊಂದರ ನಿರೂಪಣೆ ಮಾಡುತ್ತಾ ಅಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಎಂದು ಕೂಗಿ ಸಂಭ್ರಮಿಸಿ ವಿಡಿಯೊ ಹಂಚಿಕೊಂಡಿದ್ದಾರೆ.

ಅಲ್ಲದೇ ಎಬಿಡಿ ಆರ್‌ಸಿಬಿ ಜೆರ್ಸಿಗೆ ಮ್ಯಾನೇಜ್‌ಮೆಂಟ್ ಎರಡು ಸ್ಟಾರ್ ಹಾಕುವುದಕ್ಕೂ ಮುನ್ನವೇ ತಾವೇ ಆರ್‌ಸಿಬಿ ಲೋಗೊ ಮೇಲೆ ಎರಡು ಸ್ಟಾರ್ ಹಾಕಿ ಮಾಡಿದ ವಿಡಿಯೊ ಎಡಿಟ್ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular