HomeLatest NewsIPL 2026: ಆತನೇ ಸರಿ, ಸಂಜುಗೆ ಚೆನ್ನೈ ನಾಯಕತ್ವ ನೀಡಬಾರದು, ನೀಡಲ್ಲ ಎಂದು ಹೇಳಿಬಿಡಬೇಕು ಎಂದ...

IPL 2026: ಆತನೇ ಸರಿ, ಸಂಜುಗೆ ಚೆನ್ನೈ ನಾಯಕತ್ವ ನೀಡಬಾರದು, ನೀಡಲ್ಲ ಎಂದು ಹೇಳಿಬಿಡಬೇಕು ಎಂದ ಡಿವಿಲಿಯರ್ಸ್!

ಇದೇ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದೆ.

ಮಾರ್ಚ್ 30ರಂದು ಗುವಾಹಟಿಯಲ್ಲಿ ನಡೆಯಲಿರುವ ಟೂರ್ನಿಯ 3ನೇ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇನ್ನು ಎಂಎಸ್ ಧೋನಿ ಬಳಿಕ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಐದು ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಹೊತ್ತುಕೊಂಡಿದ್ದಾರೆ. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್ ಆದ ಬಳಿಕ ಅನುಭವಿ ಸಂಜು ಹೆಗಲಿಗೆ ಸಿಎಸ್‌ಕೆ ನಾಯಕತ್ವದ ಜವಾಬ್ದಾರಿ ಬೀಳಲಿದೆಯಾ ಎಂಬ ಪ್ರಶ್ನೆಗಳು ಹಾಗೂ ಸುದ್ದಿಗಳು ಹರಿದಾಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಬಾರದು ಎಂದಿದ್ದಾರೆ. ‘ಚೆನ್ನೈ ಸೂಪರ್ ಕಿಂಗ್ಸ್ ಸರಿಯಾದ ನಾಯಕನನ್ನು ಪಡೆದುಕೊಂಡಿದ್ದಾರೆ ಎಂದು ಭಾವಿಸುತ್ತೇನೆ. ಕಳೆದ ಕೆಲ ವರ್ಷಗಳಿಂದ ರುತುರಾಜ್‌ರನ್ನು ನಾಯಕನನ್ನಾಗಿ ಅವರು ಪಳಗಿಸಿದ್ದು, ಸಂಜು ಸ್ಯಾಮ್ಸನ್‌ರನ್ನು ನಾಯಕನನ್ನಾಗಿ ನೇಮಿಸುವ ಮನಸ್ಥಿತಿಯಲ್ಲಿ ಅವರಿಲ್ಲ ಎನಿಸುತ್ತದೆ. ಒಬ್ಬನೇ ನಾಯಕ ಎಂದು ನಿಶ್ಚಯವಾಗಿಬಿಡಿ. ಮಾಧ್ಯಮಗಳು ಹೇಳುವ ಹಾಗೆ ಸಂಜು ಸ್ಯಾಮ್ಸನ್ ನೂತನ ನಾಯಕ ಎಂಬ ವರದಿಗಳನ್ನು ಮನರಂಜಿಸಬಾರದು. ಸಿಎಸ್‌ಕೆ ತಂಡಕ್ಕೆ ನಾಯಕತ್ವ ಬದಲಾವಣೆಯ ಅವಶ್ಯಕತೆ ಇಲ್ಲ’ ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಡಿ ವಿಲಿಯರ್ಸ್ ‘ಆ ರೀತಿಯ ಪ್ರಶ್ನೆಗಳು ಕೇಳಿಬಂದರೆ ಸಿಎಸ್‌ಕೆ ರುತುರಾಜ್ ಗಾಯಕ್ವಾಡ್ ನಮ್ಮ ನಾಯಕ, ನಾಯಕತ್ವದ ಬದಲಾವಣೆ ಕುರಿತು ಯಾವುದೇ ಮಾತುಗಳಿಲ್ಲ ಎಂದು ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳಿಬಿಡಬೇಕು. ಸಂಜು ಸ್ಯಾಮ್ಸನ್, ಎಂಸ್ ಧೋನಿ ಹಾಗೂ ಇತರೆ ಹಿರಿಯ ಆಟಗಾರರು ಬೆಂಬಲಿಗರಾಗಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular