CIPET : ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯ ಹಾಗೂ ಕಾರ್ಪೋರೇಟ್ ಸಾಮಾಜಿಕ ಜವಬ್ದಾರಿ ಯೋಜನೆಯಡಿ ಪಾಲಿಮರ್ ಮತ್ತು ಪ್ಲಾಸ್ಟಿಟ್ ಕ್ಷೇತ್ರದಲ್ಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರದ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ ವತಿಯಿಂದ ಮೈಸೂರಿನ ಸಿಪೆಕ್‍ನಲ್ಲಿ ಎಲ್ಲಾ ವರ್ಗದ ಬಡ ನಿರುದ್ಯೋಗಿ ಯುವಕ ಹಾಗೂ ಯುವಕರಿಗೆ ಪಾಲಿಮರ್ ತಂತ್ರಜ್ಞಾನದಲ್ಲಿ 3 ರಿಂದ 6 ತಿಂಗಳ ಉಚಿತ ತರಬೇತಿಗಳನ್ನು ನೀಡಲಾಗುತ್ತಿದೆ. 18 ರಿಂದ 35 ವರ್ಷದೊಳಗಿನ, 2.5 ಲಕ್ಷದೊಳಗಿನ ಕುಟುಂಬ ಆದಾಯ ಹೊಂದಿರುವ 10 ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದಾಗಿದೆ.

ಪ್ಲಾಸ್ಟಿಕ್ ಪ್ರೊಸೆಸಿಂಗ್‍ನಲ್ಲಿ ಅಸಿಸ್ಟೆಂಟ್ ಮೆಷಿನ್ ಅಪರೇಟರ್, ಮೆಷಿನ್ ಅಪರೆಟರ್ ಇಂಜಕ್ಷನ್ ಮೋಲ್ಡಿಂಗ್, ಮೆಷಿನ್ ಆಪರೇಟರ್ ಮತ್ತು ಪ್ರೋಗ್ಯಾಮರ್‍ಗಳಿಗೆ ಕೌಶಲದ ತರಬೇತಿ ನೀಡಲಾಗುವುದು, ತರಬೇತಿ ನಂತರ ಉದ್ಯೊಗಾವಕಾಶವನ್ನು ಕಲ್ಪಿಸಿ ಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಿಪೆಟ್ ಕಛೇರಿ ದೂರವಾಣಿ ಸಂಖ್ಯೆ 9380756024, 9741719645 ಹಾಗೂ 9483431968 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ದಾಖಲಾತಿ ವಿವರಗಳಿಗೆ ವೆಬ್‍ಸೈಟ್ www.cipet.gov.in ಭೇಟಿ ನೀಡಬಹುದು ಎಂದು ತರಬೇತಿ ವಿಭಾಗದ ವ್ಯವಸ್ಥಾಪಕ ಬಿ.ಎನ್. ಮೋಹನ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read